ಗುಮ್ಮಟನಗರಿಯಲ್ಲಿ ಧಾರಾಕಾರ ಮಳೆ, ಜನಜೀವನ ಅಸ್ತವ್ಯಸ್ತ, ಸಮಸ್ಯೆ ಆಲಿಸಿದ ಶಾಸಕ ದೇವಾನಂದ ಚವಾಣ್
ವಿಜಯಪುರ: ಗುಮ್ಮಟನಗರಿಯಲ್ಲಿ ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ವಿಜಯಪುರದ ವಿವಿಧ ಬಡಾವಣೆಗಳಲ್ಲಿ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಅಂಗಡಿ ಮುಂಗಟ್ಟುಗಳಲ್ಲಿ ನೀರು ತುಂಬಿ ಹಾನಿಯಾಗಿದೆ. ಜನರು ಕಣ್ಣೀರಾಗಿದ್ದಾರೆ
ಹೀಗಾಗಿ ನಾಗಠಾಣ ಶಾಸಕ ಡಾ.ದೇವಾನಂದ ಚವಾಣ್ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಜನರ ಸಮಸ್ಯೆ ಆಲಿಸಿದರು.
ನಾಗಠಾಣ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿಜಯಪುರ ನಗರದ ವಾರ್ಡ್ ನಂಬರ್ 12 ರ ಕಾಶಿಮಕೇರಿ ತಾಂಡಾದಲ್ಲಿನ ಶ್ಸಂತೋಷ ರಾಠೋಡ ಇವರ ಮನೆಗೆ ಅಪಾರ ಪ್ರಮಾಣದ ಮಳೆ ನೀರು ತುಂಬಿ ಹಾನಿಯಾದ ಸ್ಥಳಕ್ಕೆ ಶಾಸಕ ದೇವಾನಂದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಹಾನಗರ ಪಾಲಿಕೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಶ್ಮಿ ಮಾಲಗಾವಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಇಂಜಿನಿಯರ್ ರಾಜಶೇಖರ ಚವ್ಹಾಣ ಮತ್ತು ತಾಂಡಾದ ಪ್ರಮುಖರಾದ ನಾತು ದೊಡಮನಿ, ಶಿವು ರಾಠೋಡ, ರಾಜು ಚವಾಣ, ಗುಲಾಬ ಚವಾಣ, ಶಿವು ಹಿರೇಕುರುಬರ ಸೇರಿದಂತೆ ಇನ್ನಿತರ ಮುಖಂಡರು ಅಧಿಕಾರಿಗಳು ಉಪಸ್ಥಿತರಿದ್ದರು.