ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಚಿರತೆ ಭಯ, ಸಂಗೋಗಿ ಜಮೀನಿನಲ್ಲಿ ಕಂಡಿದ್ದು ಚಿರತೆಯಾ?
ಸರಕಾರ ನ್ಯೂಸ್ ಇಂಡಿ
ದಿನದಿಂದ ದಿನಕ್ಕೆ ಚಿರತೆ ಭಯ ಹೆಚ್ಚುತ್ತಿದ್ದು, ಸಾರ್ವಜನಿಕರು ತೀವ್ರ ಆತಂಕಗೊಳ್ಳುತ್ತಿದ್ದಾರೆ.
ಕಳೆದೊಂದು ವಾರದಿಂದ ಸಿಂದಗಿ ಹಾಗೂ ಇಂಡಿ ಭಾಗದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದೆ ಎಂದು ಜನ ಆತಂಕ ವ್ಯಕ್ತಪಡಿಸುತ್ತಲೇ ಇದ್ದಾರೆ. ಕೆಲವು ದಿನಗಳ ಹಿಂದೆ ಅಥರ್ಗಾ, ತಾಂಬಾ ಸುತ್ತಲಿನ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ಹಾವಳಿ ಜೋರಾಗಿತ್ತು.
ಇದೀಗ ಇಂಡಿ ತಾಲೂಕಿನ ಸಂಗೋಗಿ ಬಳಿ ಜಮೀನೊಂದರಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ಜನ ಮಸುಕಾದ ಫೋಟೊ ಹರಿಬಿಟ್ಟಿದ್ದಾರೆ. ದೂರದಿಂದ ಮಂಜು ಮಂಜಾಗಿ ಕಾಣುವ ಪ್ರಾಣಿ ನಿಜಕ್ಕೂ ಚಿರತೆಯಾ ಎಂಬುದನ್ನು ಕಂಡವರೇ ದೃಢಪಡಿಸಬೇಕು.
ಅಲ್ಲದೇ,
https://sarakarnews.com/#google_vignette
ಜಮೀನಿನಲ್ಲಿ ಚಿರತೆಯ ಹೆಜ್ಜೆ ಗುರುತು ಕಾಣಿಸಿಕೊಂಡಿದೆ ಎಂದು ಜನ ಅದರ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಟ್ಟಿದ್ದಾರೆ. ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ಸಿಂದಗಿ ಮತ್ತು ಇಂಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿದ್ದು, ಕೆಲವೆಡೆ ಬೋನು ಅಂದರೆ ಪಂಜರ ಸಹ ಇರಿಸಿದ್ದಾರೆ. ಯಾವುದಕ್ಕೂ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದ್ದು, ಪ್ರಜ್ಞಾವಂತರು ಈ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವುದು ಒಳಿತು.