ಅನೈತಿಕ ಸಂಬಂಧ ! ಭೀಮಾತೀರದಲ್ಲಿ ಬರ್ಬರ ಹತ್ಯೆ
ವಿಜಯಪುರ: ಅನೈತಿಕ ಸಂಬಂಧಕ್ಕೆ ವ್ಯಕ್ತಿಯ ಕೊಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹೊಳೆ ಶಿರನಾಳ ಗ್ರಾಮದಲ್ಲಿ ನಡೆದಿದೆ. ಶ್ರೀಧರ ಶಾಂತಪ್ಪ ವಾಗ್ಮೋರೆ (40) ಹತ್ಯೆಯಾದ ವ್ಯಕ್ತಿ. ಸುರೇಶ ಶಿವಶರಣ ಕೊಲೆ ಮಾಡಿದ ವ್ಯಕ್ತಿ. ಸೌದಿಯಲ್ಲಿ ಕಾರ್ಮಿಕ ಕೆಲಸದಲ್ಲಿದ್ದ ಸುರೇಶ ಶಿವಶರಣನ ಪತ್ನಿಯೊಂದಿಗೆ ಶ್ರೀಧರ ಅಕ್ರಮ ಸಂಬಂಧ ಹೊಂದಿದ್ದನು. ಸುರೇಶ ಜೊತೆಗೆ ಬಾಳಲು ಒಪ್ಪದೆ ಶ್ರೀಧರ ಜೊತೆಗೆ ಸಂಸಾರ ಶುರು ಮಾಡಿದ್ದಳು. ಅದಕ್ಕಾಗಿ ಶಿರನಾಳ ಗ್ರಾಮದ ಹೊರ ವಲಯದಲ್ಲಿ ತಲವಾರ್ ನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಝಳಕಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.