ವಿಜಯಪುರ

ಸಾಲಕೊಡುವುದಾಗಿ ವಂಚನೆ, ಪೊಲೀಸರಿಂದ ಆನ್‌ಲೈನ್‌ ವಂಚಕನ ಬಂಧನ

ಸರಕಾರ್‌ ನ್ಯೂಸ್‌ ವಿಜಯಪುರ

ಕರ್ನಾಟಕ ಸಾಲ ಒದಗಿಸುವವರು ಎಂಬ ಫೇಸ್‌ಬುಕ್‌ ಪೇಜ್‌ ಕ್ರಿಯೇಟ್‌ ಮಾಡಿ ಯಾಮಾರಿಸುತ್ತಿದ್ದ ಆರೋಪಿಯನ್ನು ವಿಜಯನಗರ ಜಿಲ್ಲೆಯ ಹೊಸಪೇಟೆಯಿಂದ ಹೆಡೆಮುರಿ ಕಟ್ಟಿ ತಂದಿದ್ದಾರೆ.

ಹೊಸಪೇಟೆಯ ಎಂಪಿ ಪ್ರಕಾಶನಗರ ನಿವಾಸಿ ರುದ್ರಮುನಿ ಬಸವರಾಜ್ ಬಂಡೆಕೊಂಚಿಗೇರಿ ಬಂಧಿತ ಆರೋಪಿ.

ಈತ ಆನ್‌ ಲೈನ್‌ ಮೂಲಕ ಲೋನ್ ನೀಡುವ ಭರವಸೆ ನೀಡಿ ಮಹೇಶ ಬಿರಾದಾರಗೆ ಮೋಸಗೈದಿದ್ದನು. ಅದಕ್ಕಾಗಿ ಮಹೇಶ ಪೊಲೀಸರಿಗೆ ದೂರು ನೀಡಿದ ಬಳಿಕ ಸಿಪಿಐ ರಮೇಶ ಅವಜಿ ನೇತೃತ್ವದ ತಂಡ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಒಂದು ಮೊಬೈಲ್, ಎರಡು ಸೀಮ್ ಜಪ್ತಿಗೈದಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ಮಾಡಿ)

error: Content is protected !!