ನಮ್ಮ ವಿಜಯಪುರ

ಒಂಟಿ ಮನೆಗಳ್ಳರ ಬಂಧನ, ಮೂವರು ಅಂದರ್…ಇಲ್ಲಿದೆ ಫುಲ್ ಡಿಟೇಲ್ಸ್

ಸರಕಾರ್ ನ್ಯೂಸ್ ವಿಜಯಪುರ

ಒಂಟಿ ಮನೆಗಳನ್ನು ಹುಡುಕಿ ಕಳ್ಳತನ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಎಸ್ ಪಿ‌ ಎಚ್.ಡಿ.ಆನಂದಕುಮಾರ ಅವರು, ನಗರದಲ್ಲಿ ಮತ್ತು ನಗರ ಹೊರವಲಯದಲ್ಲಿದ್ದ ಒಂಟಿ ಮನೆಗಳನ್ನು ಹುಡುಕಿ ಕಳ್ಳತನ ಮಾಡಿತ್ತಿದ್ದವರನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಶ್ರೀಕಾಂತ್ ಹರಿಜನ್, ಭೀಮು ಪಡಕೋಟಿ, ಆಕಾಶ ಕಲ್ಲವ್ವಗೋಳ ಬಂಧಿತ ಆರೋಪಿಗಳು.

ಇವರಿಂದ 12.50 ಲಕ್ಷ ಮೌಲ್ಯದ 250 ಗ್ರಾಂ ಚಿನ್ನ, 36 ಸಾವಿರ ಮೌಲ್ಯದ 600 ಗ್ರಾಂ ಬೆಳ್ಳಿ, 5.50 ಲಕ್ಷ ಮೌಲ್ಯದ ಒಂದು ಕಾರು, ಕೃತ್ಯಕ್ಕೆ ಬಳಿಸಿದ ಕಬ್ಬಿಣದ ರಾಡ್, ಸುತ್ತಿಗೆ ಸೇರಿದಂತೆ 18.36 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದ ಇರುವ ಇದೀಗ ಎಸ್ ಪಿ ಆನಂದಕುಮಾರ ತಿಳಿಸಿದರು.

ಕಾರ್ಯಾಚರಣೆ ಹೇಗಿತ್ತು ಗೊತ್ತಾ?

ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ಗ್ರಾಮದಲ್ಲಿ ಸೋಮನಾಥ ರುದ್ರಗೌಡ ಬಗಲಿ ಮನೆಯಲ್ಲಿ 9 ತೊಲೆ 3 ಗ್ರಾಂ ಚಿನ್ನ ಕದ್ದು ಮಾರಾಟಕ್ಕೆ ಹೋಗುವಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು ಆರೋಪಿಗಳ ಬಂಧನ ಮಾಡಿದ್ದಾರೆ.

ಮತ್ತೊಂದೆಡೆ ಬೈಕ್‌ಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನಜೀರ್ ಸಾಹೇಬಲಾಲ್ ಜಾತಗಾರ (26) ಹಾಗೂ ಅಭಿನಾಶ ಮದಾರಸಾಬ್ ವಜ್ಜಣ್ಣವರ (20) ಬಂಧಿತ ಆರೋಪಿಗಳು. ಇನ್ನು ಬಂಧಿತ ಆರೋಪಿಗಳಿಂದ 3.60 ಲಕ್ಷ ಮೌಲ್ಯದ 7 ಬೈಕ್‌ಗಳನ್ನು ಜಪ್ತಿಗೈದಿದ್ದಾರೆ. ಈ ಕುರಿತು ಗೋಳಗುಮ್ಮಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ‌. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!