ಬಿಜೆಪಿ ಮುಖಂಡನಿಂದ ಖರ್ಗೆಗೆ ಜೀವ ಬೆದರಿಕೆ, ಗೋಡ್ಸೆ ಆರಾಧಕರಿಂದ ಶಾಂತಿ ನಿರೀಕ್ಷಿಸಲು ಸಾಧ್ಯವೇ? ದಿನೇಶ ಗುಂಡೂರಾವ್ ಸರಣಿ ಟ್ವೀಟ್….!
ಸರಕಾರ್ ನ್ಯೂಸ್ ಬೆಂಗಳೂರ
ಶಾಸಕ ಪ್ರಿಯಾಂಕ ಖರ್ಗೆಗೆ ಜೀವ ಬೆದರಿಕೆ ಹಾಕಿರುವ ಹಿನ್ನೆಲೆ ಕಾಂಗ್ರೆಸ್ ನಾಯಕ ದಿನೇಶ ಗುಂಡೂರಾವ ಬಿಜೆಪಿ ವಿರುದ್ದ ಸರಣಿ ಟ್ವೀಟ್ ಮೂಲಕ ತೀವ್ರವಾಗಿ ಖಂಡಿಸಿದ್ದಾರೆ.
ಬಿಜೆಪಿ ಮುಖಂಡನೋರ್ವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ ಹಾಕಿದ್ದು, ಇದು ಖಂಡನೀಯ ಎಂದಿದ್ದಾರೆ.
ಅಲ್ಲದೇ, ಹೊಡಿ ಬಡಿ ಸಂಸ್ಕೃತಿಯ ಬಿಜೆಪಿಯವರು ಶಾಸಕ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ ಹಾಕಿದ್ದಾರೆ.
ಬಿಜೆಪಿಯವರದ್ದು ಸದಾ ಕೊಲೆಗಡುಕ ಮನಸ್ಥಿತಿ. ಹಿಂಸೆಯ ಮೂಲಕ ಎದುರಾಳಿಗಳ ಸದ್ದಡಗಿಸುವ ಭ್ರಮೆ ಬಿಜೆಪಿ ನಾಯಕರಲ್ಲಿದೆ.
ಗಾಂಧಿ ಕೊಂದ ಹಂತಕ ಗೋಡ್ಸೆಯನ್ನು ಆರಾಧಿಸುವ BJPಯವರಲ್ಲಿ ಕ್ರೌರ್ಯವನ್ನಲ್ಲದೆ ಅಹಿಂಸೆ ಹಾಗೂ ಶಾಂತಿ ನಿರೀಕ್ಷೆ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ವೈಚಾರಿಕ ದಾರಿದ್ರ್ಯದಿಂದ ಬಳಲುತ್ತಿರುವ BJPಯವರಿಗೆ ಶಾಸಕ ಪ್ರಿಯಾಂಕ್ ಖರ್ಗೆಯವರ ವೈಚಾರಿಕ ಚಿಂತನೆಗಳು ಅಪಥ್ಯ.
ತಮಗೆ ಅಪಥ್ಯವಾಗುವುದನ್ನು BJPಯವರು ಯಾವತ್ತೂ ಸಹಿಸುವುದಿಲ್ಲ.
ಮನಸ್ಸಿನಲ್ಲಿ ಅಸಹಿಷ್ಣತೆಯ ವಿಷ ತುಂಬಿಕೊಂಡಿರುವ BJPಯವರ ಅಂತಿಮ ಆಯ್ಕೆಯೆ ಹಿಂಸೆ.
ಪ್ರಿಯಾಂಕ್‌ರವರಿಗೆ ಜೀವ ಬೆದರಿಕೆ ಹಾಕಿರುವುದು ಅಸಹಿಷ್ಣತೆಯ ಭಾಗ ಎಂದಿದ್ದಾರೆ.