ಶಾಲೆಗಳಿಗೆ ಕೇಸರಿ ಬಣ್ಣದ ಬದಲು ಶೌಚಾಲಯ ಕೊಡಿಸಿ ಸಿಎಂ ಅಂಕಲ್…..ಕಾಂಗ್ರೆಸ್ ನಿಂದ ಅಭಿಯಾನ
ಸರಕಾರ್ ನ್ಯೂಸ್ ಬೆಂಗಳೂರು
ವಿವೇಕ ಶಾಲೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲು ಮುಂದಾಗಿರುವ ಸರ್ಕಾರದ ವಿರುದ್ಧ ಕಾಂಗ್ರೆಸ್ ವಿನೂತನ ಅಭಿಯಾನ ಆರಂಭಿಸಿದೆ.
ರಾಜ್ಯದಲ್ಲಿ 2628 ಶಾಲೆಗಳಿಗೆ ಶೌಚಗೃಹಗಳೇ ಇಲ್ಲ. ಶಾಲೆ ರಿಪೇರಿಗೊಳ್ಳದೇ ಮೇಲ್ಛಾವಣಿ ಕುಸಿಯುತ್ತಿದೆ. ಇದರಿಂದ ಮಕ್ಕಳು ಅಪಾಯದಲ್ಲಿ ಶಿಕ್ಷಣ ಕಲಿಯುತ್ತಿದ್ದಾರೆ. ಹೀಗಾಗಿ ಬಣ್ಣದ ಬದಲು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
ರಾಜ್ಯಾದ್ಯಂತ ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ, ಶೌಚಾಲಯವಿಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ.#ಸಿಎಂಅಂಕಲ್,
ಕೇಸರಿ ಬಣ್ಣ ಬಳಿಯುವಿರಂತೆ, ಆದರೆ ಮೊದಲು ಶೌಚಾಲಯ ಕಟ್ಟಿಸಿಕೊಡಿ. ಕುಡಿಯಲು ಶುಚಿಯಾದ ನೀರು ಕೊಡಿ,
ಶಾಲೆಗಳು ಮಕ್ಕಳನ್ನು ಆಕರ್ಷಿಸುವಂತೆ ಮಾಡಿಕೊಡಿ. pic.twitter.com/abMgboxDnZ— Karnataka Congress (@INCKarnataka) November 14, 2022
ಈ ಬಗ್ಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅಭಿಯಾನ ಆರಂಭಿಸಿರುವ ಕಾಂಗ್ರೆಸ್ “ಸಿಎಂ ಅಂಕಲ್ ಬಣ್ಣದ ಬದಲು 2628 ಶಾಲೆಗಳಿಗೆ ಶೌಚಾಲಯ ಇಲ್ಲ, ಮೊದಲು ಶೌಚಾಲಯ ವ್ಯವಸ್ಥೆ ಕಲ್ಪಿಸಿ” ಎಂದು ಅಭಿಯಾನ ಆರಂಭಿಸಿದೆ.
ಆದರೆ, ಬಿಜೆಪಿ ಮಾತ್ರ ಕಾಂಗ್ರೆಸ್ ಗೆ ಕೇಸರಿ ಎಂದರೆ ಅಲರ್ಜಿ ಎಂದು ಕಿಡಿಕಾರಿದೆ.