ಗೃಹ ನಿರ್ಮಾಣ ಸಹಕಾರ ಸಂಘಗಳ ಅವ್ಯವಹಾರ, 72 ಸಂಘಗಳ ವಿರುದ್ಧ ದೂರು ದಾಖಲು….!
ಬೆಂಗಳೂರು: ರಾಜ್ಯಾದ್ಯಂತ ಗೃಹ ನಿರ್ಮಾಣ ಸಹಕಾರ ಸಂಘಗಳಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಿದ್ದು, ಆ ಪೈಕಿ 72 ಸಂಘಗಳ ವಿರುದ್ಧ ದೂರು ದಾಖಲಾಗಿದೆ.
ರಾಜ್ಯದಲ್ಲಿ 2021 ಮಾ.31 ರ ಅಂತ್ಯಕ್ಕೆ ಒಟ್ಟು 1828 ಗೃಹ ನಿರ್ಮಾಣ ಸಹಕಾರ ಸಂಘಗಳು ಇರುತ್ತವೆ. ಇವುಗಳಲ್ಲಿ 1187 ಕಾರ್ಯನಿರತ, 279 ಸ್ಥಗಿತ ಮತ್ತು 362 ಸಮಾಪನೆಯಲ್ಲಿರುತ್ತವೆ. ನೋಂದಾಯಿತ ಗೃಹ ನಿರ್ಮಾಣ ಸಹಕಾರ ಸಂಘಗಳ ಪೈಕಿ ಕೇವಲ 5 ಸಹಕಾರ ಸಂಘಗಳು ರೇರಾ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಂಡಿವೆ. ಹಲವಾರು ಸಂಘಗಳು ಹತ್ತಾರು ವರ್ಷಗಳ ಅವಧಿ ನಂತರವೂ ಅರ್ಹ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡದೆ ವಿಳಂಬ ಮಾಡುತ್ತಿದ್ದು, ಈ ಬಗ್ಗೆ ದೂರುಗಳು ದಾಖಲಾಗಿವೆ.
ಒಟ್ಟು 72 ಗೃಹ ನಿರ್ಮಾಣ ಸಹಕಾರ ಸಂಘಗಳ ವಿರುದ್ದ ನಿವೇಶನ ನೀಡುವಲ್ಲಿ ವಿಳಂಬ ಮಾಡುತ್ತಿರುವ ಕುರಿತು ದೂರುಗಳು ದಾಖಲಾಗಿವೆ. ಈ ದೂರು ದಾಖಲಿಸಲ್ಪಟ್ಟ ಗೃಹ ನಿರ್ಮಾಣ ಸಹಕಾರ ಸಂಘಗಳ ಪೈಕಿ ಕೇಂದ್ರ ಹಾಗೂ ರಾಜ್ಯ ಸರಕಾರದ ನೌಕರ ಸದಸ್ಯರನ್ನು ಹೊಂದಿರುವ 26 ಗೃಹ ನಿರ್ಮಾಣ ಸಹಕಾರ ಸಂಘಗಳನ್ನು ಒಳಗೊಂಡಿವೆ. ಅವುಗಳೆಂದರೆ–
- 1.ದಿ ಕಸ್ಟಮ್ಸ್ ಸೆಂಟ್ರಲ್ ಎಕ್ಸೈಜ್ ಮತ್ತು ಸರ್ವಿಸ್ ಟ್ಯಾಕ್ಸ್, ಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿ ಲಿ, ಬೆಂಗಳೂರು,
- 2. ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿಯವರ ಗೃಹ ನಿರ್ಮಾಣ ಸಹಕಾರ ಸಂಘ ನಿ, ನಂ.113, 3 ನೇ ಮಹಡಿ, ಎಸ್‌ಬಿಎಂ ಬ್ಯಾಂಕ್ ಮುಖ್ಯ ಕಚೇರಿ ಹಿಂಭಾಗ, ಹಾಸ್ಪಿಟಲ್ ರಸ್ತೆ ಬೆಂಗಳೂರು ವಿಳಾಸ; ಶಿವಾನಂದ ಸರ್ಕ್‌ಲ್ ಹತ್ತಿರ, ಶೇಶಾದ್ರಿಪುರಂ, ಬೆಂಗಳೂರು
- 3. ಟೆಲಿಕಾಂ ಎಂಪ್ಲಾಯೀಸ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಲಿ, ಬೆಂಗಳೂರು
4. ವಿಶಾಲ ಕರ್ನಾಟಕ ಗೌರ್ನಮೆಂಟ್ ಅಂಡ್ ಪ್ರೈವೇಟ್ ಎಂಪ್ಲಾಯೀಸ್ ಹೌಸಿಂಗ್ ಕೋ ಆಪರೇಟಿವ್ ಸೋಸೈಟಿ ನಿ, ನಂ.456, 10 ನೇ ಎ ಕ್ರಾಸ್, ದೊಡ್ಡನಗೌಡನ ಪಾಳ್ಯದ ಹತ್ತಿರ ಉತ್ತರಹಳ್ಳಿ, ಮುಖ್ಯ ರಸ್ತೆ,ಸುಬ್ರಮಣ್ಯಪುರ ಅಂಚೆ, ಬೆಂಗಳೂರು
5. ಕರ್ನಾಟಕ ದೂರ ಸಂಪರ್ಕ ಇಲಾಖೆ ನೌಕರರ ಸಕಾರ ಸಂಘ ನಿ, ಅಮಿಮಸ್ ಕ್ಯಾಶಲ್, ನಂ.706. 1 ನೇ ಮಹಡಿ, ಎಚ್‌ಎಂಟಿ ಬಡಾವಣೆ, ಆರ್‌ಟಿ ನಗರ ಅಂಚೆ ಬೆಂಗಳೂರು-560032
6. ಕೃಷಿ ವಿಶ್ವ ವಿದ್ಯಾನಿಲಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಬೆಂಗಳೂರು
7. ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಬೆಂಗಳೂರು
8. ಕರ್ನಾಟಕ ಪೋಸ್ಟಲ್ ಆಂಡ್ ಟೆಲಿಕಾಂ ಎಂಪ್ಲಾಯೀಸ್ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಲಿ, ಬೆಂಗಳೂರು
9. ರೈಲ್ವೆಮನ್ ಗೃಹ ನಿರ್ಮಾಣ ಸಹಕಾರ ಸಂಘ ನಿ., ಸದರನ್ ರೈಲ್ವೆ ಇನ್ ಸ್ಟೀಟ್ಯೂಟ್ ಬಿಲ್ಡಿಂಗ್, ಎಂಜಿ ರೈಲ್ವೆ ಕಾಲನಿ ಬೆಂಗಳೂರು-9
10. ಕರ್ನಾಟಕ ಬಿಎಸ್‌ಎನ್‌ಎಲ್ ರೈಲ್ವೆ ಮತ್ತು ಕೇಂದ್ರ ಸರ್ಕಾರದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ, ನಂ.675, 2ನೇ ಕ್ರಾಸ್ ಸುಗಪ್ಪ ಲೇಔಟ್ ಎನ್‌ಇಎಸ್ ಕಚೇರಿ ರಸ್ತೆ, ಅಯೋಧ್ಯೆ ಕಾಂಪ್ಲೆಕ್ಸ್ ಹತ್ತಿರ, ಯಲಹಂಕ
11. ಬಿಎಸ್‌ಎನ್‌ಎಲ್ ಇನ್‌ಫಾರ್ಮೇಶನ್ ಟೆಕ್ನಾಲಜಿ ಇಎಸ್‌ಯು ಅಂಡ್ ಅದರ್ಸ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಲಿ. ದೇವನಹಳ್ಳಿ, ಬೆಂಗಳೂರು
12. ವಿಧಾನ ಮಂಡಲ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಬೆಂಗಳೂರು
13. ಮಿನಿಸ್ಟ್ರೀ ಆಫ್ ಕಮುನಿಕೇಶನ್ ಎಂಪ್ಲಾಯೀಸ್ ಕೋ ಆಪರೇಟಿವ್ ಹೌಸಿಂಗ್ ಲಿ. ಬೆಂಗಳೂರು
14. ಸಚಿವಾಲಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ. ಬೆಂಗಳೂರು
15. ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ. ಕೋಲಾರ
16. ಕರ್ನಾಟಕ ಗೌರ್ನಮೆಂಟ್ ಗ್ರು ಡಿ ನೌಕರರ ಸಹಕಾರ ಸಂಘ ನಿ.ಬೆಂಗಳೂರು
17. ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ. ಮೈಸೂರು
18. ಕಾಲೇಜ್ ಅಧ್ಯಾಪಕರ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘ ನಿ, ಮೈಸೂರು
19. ಮೈಸೂರು ಚಾಮರಾಜನಗರ ಜಿಲ್ಲಾ ಖಜಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ. ಮೈಸೂರು
20. ಕರ್ನಾಟಕ ರಾಜ್ಯ ಸರ್ಕಾರಿ ಡಿ ಗ್ರೂಫ್ ನೌಕರರ ಕ್ಷೇಮಾಭಿವೃದ್ಧಿ ಗೃಹ ನಿರ್ಮಾಣ ಸಹಕಾರ ಸಂಘ ನಿ. ಮೈಸೂರು
21. ಕರ್ನಾಟಕ ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘ ನಿ. ಮೈಸೂರು
22. ಹಾಸನ ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ. ಹಾಸನ
23. ಮೈಸೂರು ವಿಶ್ವ ವಿದ್ಯಾನಿಲಯ ಉದ್ಯೋಗಿಗಳ ಗೃಹ ನಿರ್ಮಾಣ ಸಹಕಾರ ಸಂಘ ನಿ. ಮೈಸೂರು
24. ರೀಜನಲ್ ಕಾಲೇಜು ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ. ಮೈಸೂರು
25. ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕಂದಾಯ ಇಲಾಖಾ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ. ಮೈಸೂರು
26. ಸೌತ್ ವೆಸ್ಟ್ರನ್ ರೈಲ್ವೆ ಎಂಪ್ಲಾಯೀಸ್ ಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸೋಸೈಟಿ ಲಿ. ಮೈಸೂರು
ದೂರು ದಾಖಲಾದ ಪ್ರಕರಣಗಳ ಬಗ್ಗೆ ತನಿಖೆ ಕೈಗೊಂಡು ಕಾನೂನು ಕ್ರಮ ಜರುಗಿಸುವ ನಿಟ್ಟಿನಲ್ಲಿ ಸಹಕಾರ ಇಲಾಖೆ ದಿಟ್ಟ ಹೆಜ್ಜೆಯನ್ನಿರಿಸಿದೆ.