ಬೆಂಗಳೂರು

ಗೋವಿಂದ ಕಾರಜೋಳ ಬಣ್ಣ ಬಯಲು ? ಎಂ.ಬಿ. ಪಾಟೀಲ ಖಾರವಾಗಿ ಹೇಳಿದ್ದು ಏಕೆ?

ಬೆಂಗಳೂರು: ರಾಜ್ಯದ ನೀರಾವರಿ ಯೋಜನೆಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಒದಗಿಸುವಲ್ಲಿ ವಿಫಲವಾಗಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿರುದ್ಧ ಮಾಜಿ ಸಚಿವ ಎಂ.ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಪ್ರಸಕ್ತ ಬಜೆಟ್‌ನಲ್ಲಿ ನೀರಾವರಿ ಇಲಾಖೆಗೆ 20 ಸಾವಿರ ಕೋಟಿ ರೂ.ನೀಡಿದ್ದು ಸಣ್ಣ ನೀರಾವರಿ ಇಲಾಖೆಗೆ ಕನಿಷ್ಠ 3 ಸಾವಿರ ಕೋಟಿ ರೂ.ಖರ್ಚಾಗಲಿದೆ. ಬಾಕಿ ಉಳಿಯುವ 17 ಸಾವಿರ ಕೋಟಿ ರೂ.ಗಳಲ್ಲಿ 10-12 ಸಾವಿರ ಕೋಟಿ ರೂ.ಮೊತ್ತದ ಕಾಮಗಾರಿಗಳ ಹಿಂದಿನ ಬಿಲ್ ಬಾಕಿ ಇದೆ. ಅವರನ್ನು ಪಡೆದಾಗ 5 ಸಾವಿರ ಕೋಟಿ ರೂ.ಮಾತ್ರ ಉಳಿಯಲಿದೆ. ಇದರಲ್ಲಿ ರಾಜ್ಯದ ನೀರಾವರಿ ಯೋಜನೆಗಳನ್ನು ಹೇಗೆ ಕೈಗೆತ್ತಿಕೊಳ್ಳುತ್ತಾರೆ ಎಂಬುದೇ ಎಂ.ಬಿ.. ಪಾಟೀಲರ ಪ್ರಶ್ನೆ.
2018ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 1.50 ಲಕ್ಷ ಕೋಟಿ ಹಣವನ್ನು ನೀರಾವರಿ ಯೋಜನೆಗಳಿಗೆ ಒದಗಿಸುವುದಾಗಿ ಪ್ರಾಣಾಳಿಕೆಯಲ್ಲಿ ಹೇಳಿದ್ದರು. ಅಧಿಕಾರಕ್ಕೆ ಬಂದಾಗಿನಿಂದ ಈವರೆಗೆ ಕೇವಲ 40 ಸಾವಿರ ಕೋಟಿ ರೂ. ಖರ್ಚು ಮಾಡಿದೆ. ಈ ವರ್ಷ 17 ಸಾವಿರ ಕೋಟಿ, ಮುಂದಿನ ವರ್ಷದ ಬಜೆಟ್ ಲೆಕ್ಕಕ್ಕಿಲ್ಲ.
ಯುಕೆಪಿಗೆ 5 ಸಾವಿರ ಕೋಟಿ ರೂ. ನೀಡಿದ್ದಾಗಿ ಹೇಳಿದ್ದು 3 ಸಾವಿರ ಕೋಟಿ ರೂ. ಮೊತ್ತದ ಬಿಲ್ ಬಾಕಿ ಇವೆ. ಎಸ್‌ಸಿಪಿ/ಟಿಎಸ್‌ಪಿ ಯೋಜನೆ ಮತ್ತು ಆಡಳಿತಾತ್ಮಕ ಖರ್ಚು ವೆಚ್ಚಗಳು ಯುಕೆಪಿಗೆ ಸಂಬಂಧಿಸಿದ ಹೊಸ ಯೋಜನೆಗೆ ಮತ್ತು ಆಡಳಿತಾತ್ಮಕ ವೆಚ್ಚವನ್ನು ಮಾಡಿದರೆ ಯುಕೆಪಿಗೆ ಸಂಬಂಧಿಸಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಆಗುವುದಿಲ್ಲ. ಇನ್ನು ಪುನರ್ ವಸತಿ ಪುನರ್ ನಿರ್ಮಾಣಕ್ಕೆ ಎಲ್ಲಿಂದ ಹಣ ತರುತ್ತಾರೆಂದು ಅವರು ಪ್ರಶ್ನಿಸಿದರು.
ಎತ್ತಿನಹೊಳೆಗೆ 3 ಸಾವಿರ ಕೋಟಿ ನೀಡಿದ್ದು ಅಲ್ಲಿ 3 ಸಾವಿರ ಕೋಟಿ ಬಾಕಿ ಇದೆ. ತುಂಗಭದ್ರಾ, ಮೇಕೆದಾಟ ಮತ್ತು ಮಹದಾಯಿ ಯೋಜನೆಗೆ ಹಣ ನೀಡಿದರೂ ನ್ಯಾಯಾಲಯದಲ್ಲಿ ವ್ಯಾಜ್ಯದಿಂದ ಹಣ ಖರ್ಚು ಮಾಡಲು ಆಗುವುದಿಲ್ಲ. ಹೀಗಾಗಿ ಇದೊಂದು ಸುಳ್ಳಿನ ಬಜೆಟ್ ಎಂದು ಎಂ.ಬಿ. ಪಾಟೀಲ ಟೀಕಿಸಿದ್ದಾರೆ.
ಬಂಪರ್‌ ಬಜೆಟ್‌ ಕೊಡುತ್ತೇನೆಂದು ಕೊಚ್ಚಿಕೊಂಡಿದ್ದ ಸಚಿವ ಗೋವಿಂದ ಕಾರಜೋಳ ಅವರ ಬಣ್ಣ ಇದೀಗ ಬಯಲಾಗಿದೆ ಎಂದು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

error: Content is protected !!