ಬೆಂಗಳೂರು

ಉದ್ಯೋಗಾಕಾಂಕ್ಷಿಗಳೇ ಗಮನಿಸಿ, ರಾಜ್ಯದ 43 ಇಲಾಖೆಗಳಲ್ಲಿ ಶೇ.34 ಹುದ್ದೆ ಖಾಲಿ, ಭರ್ತಿಗೆ ಸರ್ಕಾರ ಕೈಗೊಂಡ ಕ್ರಮ ಏನು? ಇಲ್ಲಿದೆ ಡಿಟೇಲ್ಸ್‌

ಸರಕಾರ್‌ ನ್ಯೂಸ್‌ ಬೆಂಗಳೂರ

ಸರ್ಕಾರಿ ಹುದ್ದೆಗಳಿಗೆ ಸಕಾಲಕ್ಕೆ ನೇಮಕ ಪ್ರಕ್ರಿಯೆ ನಡೆಯದ ಕಾರಣ ಸಾರ್ವಜನಿಕ ಸೇವೆಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಶೀಘ್ರ ನೇಮಕ ಪ್ರಕ್ರಿಯೆ ನಡೆಸಬೇಕೆಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ, ಈವರೆಗೂ ನೇಮಕ ಪ್ರಕ್ರಿಯೆ ಮಾತ್ರ ತ್ವರಿತಗೊಂಡಿಲ್ಲ.

ಅಂದಹಾಗೆ ಪ್ರಸ್ತುತ ರಾಜ್ಯದಲ್ಲಿ ಎಷ್ಟು ಇಲಾಖೆಗಳಿವೆ? ಖಾಲಿ ಇರುವ ಹುದ್ದೆಗಳೆಷ್ಟು? ಭರ್ತಿಗೆ ಸರ್ಕಾರ ಕೈಗೊಂಡಿರುವ ಕ್ರಮ ಏನು? ಎಂಬುದರ ಸಮಗ್ರ ವಿವರ ಇಲ್ಲಿದೆ ನೋಡಿ….

ಶೇ.34 ರಷ್ಟು ಹುದ್ದೆ ಖಾಲಿ:

ರಾಜ್ಯದಲ್ಲಿ ವಿವಿಧ 43 ವಿವಿಧ ಇಲಾಖೆಗಳಿವೆ. “ಎ” ವೃಂದದಿಂದ “ಡಿ” ವೃಂದದವರೆಗೆ ಶೇ. 34 ರಷ್ಟು ಹುದ್ದೆಗಳು ಖಾಲಿ ಇವೆ. ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಖಾಲಿ ಇರುವ ಹುದ್ದೆಗಳಿಗೆ ಹೆಚ್ಚುವರಿ ಪ್ರಭಾರದಲ್ಲಿರಿಸಿ ದೈನದಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ವ್ಯವಸ್ಥೆ ಏನೋ ಮಾಡಲಾಗಿದೆ. ಆದರೆ, ಸಾರ್ವಜನಿಕರಿಗೆ ಮಾತ್ರ ಸಕಾಲಕ್ಕೆ ಸೇವೆ ಸಿಗುತ್ತಿಲ್ಲ.

ಗ್ರುಫ್‌ ಸಿ ವೃಂದದ ಶೀಘ್ರ ಲಿಪಿಗಾರರು, ಬೆಳಚ್ಚುಗಾರರು ಮತ್ತು ವಾಹನ ಚಾಲಕರು ಹಾಗೂ ಗ್ರೂಫ್‌ ಡಿ ವೃಂದದಲ್ಲಿನ ಖಾಲಿ ಹುದ್ದೆಗಳಿಗೆದುರಾಗಿ ಹೊರಗುತ್ತಿದೆ ಆಧಾರದ ಮೇರೆಗೆ ಭರ್ತಿ ಮಾಡಿಕೊಳ್ಳಲು ಅಂದಾಜು 82700 ಹುದ್ದೆಗಳಿಗೆ ಅನುಮತಿ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾತಿ ಪ್ರತಿಕ್ರಿಯಿಸಿದ್ದಾರೆ.

ಖಾಲಿ ಹುದ್ದೆಗಳ ವಿವರ:

ಪ್ರಸ್ತುತ ರಾಜ್ಯದಲ್ಲಿ 43 ಇಲಾಖೆಗಳಿಗೆ 7,69,981 ಹುದ್ದೆಗಳು ಮಂಜೂರಾಗಿದ್ದು ಆ ಪೈಕಿ 5,11,272 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಇನ್ನೂ 2,58,709 ಹುದ್ದೆಗಳು ಖಾಲಿ ಇವೆ. ಮಂಜೂರಾಗಿ ಖಾಲಿ ಇರುವ ಹುದ್ದೆಗಳ ಪೈಕಿ ಗ್ರುಫ್‌ ಸಿ ಮತ್ತು ಗ್ರುಫ್‌ ಡಿ ವೃಂದಗಳಲ್ಲಿ ಅಂದಾಜು 82,700 ಹುದ್ದೆಗಳನ್ನು (ಶೀಘ್ರ ಲಿಪಿಗಾರರು, ಬೆರಳಚ್ಚುಗಾರರು, ವಾಹನ ಚಾಲಕರು ಮತ್ತು ಗ್ರೂಫ್‌ ಡಿ) ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಇದೆ.

ಇಲಾಖೆವಾರು ವಿವರ:

ಕೃಷಿ ಇಲಾಖೆ-6316, ಪಶು ಸಂಗೋಪನೆ-9972, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ-8063, ಸಹಕಾರ-4738, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ-5738, ಇ-ಆಡಳಿತ-75, ಪರಿಸರ ಮತ್ತು ಜೀವಿ ಶಾಸ್ತ್ರ-4, ಇಂಧನ-245, ಆರ್ಥಿಕ-8779, ಮೀನುಗಾರಿಕೆ-777, ಆಹಾರ ಮತ್ತು ನಾಗರಿಕ ಸರಬರಾಜು-1187, ಅರಣ್ಯ-4562, ಕೈಮಗ್ಗ ಮತ್ತು ಜವಳಿ-39, ಉನ್ನತ ಶಿಕ್ಷಣ-12674, ಒಳಾಡಳಿತ-23674, ತೋಟಗಾರಿಕೆ-3092, ವಾರ್ತೆ-319, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ-60, ಕನ್ನಡ ಮತ್ತು ಸಂಸ್ಕೃತಿ ಇಲಾಖೆ-423, ಕಾರ್ಮಿಕ-2500, ಕಾನೂನು-8370, ಭಾರಿ ಮತ್ತು ಮಧ್ಯಮ ಕೈಗಾರಿಕೆ-353, ಭಾರಿ ನೀರಾವರಿ-500, ಗಣಿ-677, ಸಣ್ಣ ನೀರಾವರಿ-1095, ಅಲ್ಪಸಂಖ್ಯಾತರ ಕಲ್ಯಾಣ-3633, ಸಂಸದೀಯ ವ್ಯವಹಾರಗಳು-435, ಯೋಜನೆ ಮತ್ತು ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ-1282, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ-66059, ಲೋಕೋಪಯೋಗಿ-2063, ಕಂದಾಯ-10621-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ -10409, ಪರಿಶಿಷ್ಟ ಜಾತಿಗಳ ಕಲ್ಯಾಣ ಇಲಾಖೆ-9592, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ-2318, ರೇಷ್ಮೆ-2802, ಕೌಶಲ್ಯ ಅಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ-4216, ಸಣ್ಣ ಕೈಗಾರಿಕೆ-356, ಪ್ರವಾಸೋದ್ಯಮ-286, ಸಾರಿಗೆ-1602, ನಗರಾಭಿವೃದ್ಧಿ-839, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ-3230, ಯುವಜನ ಸೇವೆ-207 ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ-34644 ಹೀಗೆ ಒಟ್ಟು 2,58,709 ಹುದ್ದೆಗಳ ಖಾಲಿ ವಿವೆ.

ಖಾಲಿ ಇರುವ ಹುದ್ದೆಗಳಿಗೆ ಶೀಘ್ರದಲ್ಲಿಯೇ ನೇಮಕ ಪ್ರಕ್ರಿಯೆ ನಡೆಸಿದರೆ ಬಹುತೇಕ ನಿರುದ್ಯೋಗ ಸಮಸ್ಯೆ ಹೋಗಲಾಡಿಸಬಹುದೆಂಬುದು ಉದ್ಯೋಗಾಕಾಂಕ್ಷಿಗಳ ಅಭಿಲಾಷೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!