ಕರ್ನಾಟಕ ಟೂರಿಸ್ಟ್ ಮಿತ್ರರ ಸ್ಥೀತಿ ಶೋಚನೀಯ, ಸೂಕ್ತ ವೇತನವಿಲ್ಲ, ಉದ್ಯೋಗ ಭದ್ರತೆಯಿಲ್ಲ, ಕಣ್ತೆರೆಯುವುದೇ ಸರ್ಕಾರ?
ಸರಕಾರ್ ನ್ಯೂಸ್ ಬೆಂಗಳೂರ
ಗ್ರಾಮೀಣ ಪ್ರದೇಶದ ಯುವ ಸಮುದಾಯಕ್ಕೆ ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಪ್ರವಾಸಿ ಮಿತ್ರ ಯೋಜನೆ ಹಲವು ಸಮಸ್ಯೆಗಳಿಗೆ ಕಾರಣವಾಗಿದ್ದು, ಪ್ರವಾಸಿ ಮಿತ್ರರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
ಈ ಯೋಜನೆಯಡಿ ನೇಮಕಗೊಂಡು ತರಬೇತಿ ಪಡೆದ ಪ್ರವಾಸಿ ಮಿತ್ರರಿಗೆ ಸೂಕ್ತ ವೇತನ ಇಲ್ಲದ ಕಾರಣ ಮತ್ತೊಂದೆಡೆ ಉದ್ಯೋಗ ಭದ್ರತೆ ಇಲ್ಲದ ಕಾರಣ ಸಮಸ್ಯೆಗಳ ಸುಳಿಗೆ ಸಿಲುಕಿದ್ದಾರೆ. ಈ ಬಗ್ಗೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲಕುಮಾರ ಇತ್ತೀಚೆಗೆ ನಡೆದ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಗಮನ ಕೂಡ ಸೆಳೆದಿದ್ದಾರೆ.
ಸಚಿವರು ಹೇಳಿದ್ದೇನು?
ಗೃಹ ರಕ್ಷಕ ಇಲಾಖೆಯಿಂದ ಗೃಹರಕ್ಷಕರನ್ನು ಪ್ರವಾಸಿ ಮಿತ್ರರಾಗಿ ಪ್ರವಾಸೋದ್ಯಮ ಇಲಾಖೆಗೆ ರಾಜ್ಯದ ಎಲ್ಲ ಜಿಲ್ಲೆಗಳ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ 3 ತಿಂಗಳಿಗೊಮ್ಮ ಸದರಿ ಆಧಾರದ ಮೇರೆಗೆ ಕರ್ತವ್ಯ ನಿರ್ವಹಿಸಲು ಇಲಾಖೆಗಳ ಕೋರಿಕೆ ಮೇರಿಗೆ ನಿಯೋಜಿಸಲಾಗಿದೆ.
ಆರಕ್ಷಕ ಮಹಾನಿರ್ದೇಶಕರು, ಗೃಹ ರಕ್ಷಕ ದಳದ ಮಹಾ ಸಮಾದೇಷ್ಟರು ಮತ್ತು ನಿರ್ದೇಶಕರು ಪೌರ ರಕ್ಷಣೆರವರ ಮೂಲ ಇಲಾಖೆಯಿಂದ ನಿಯೋಜಿಸಿರುವ ಪ್ರವಾಸಿ ಮಿತ್ರರನ್ನು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಭದ್ರತೆ ಒದಗಿಸುವ ಸಲುವಾಗಿ ನಿಯೋಜಿಸಲಾಗಿದೆ. ಆದರೆ, ಇವರು ವೇತನ ಪರಿಷ್ಕರಣೆ ಹಾಗೂ ಉದ್ಯೋಗ ಭದ್ರತೆ ಸಮಸೆ ಎದುರಿಸುತ್ತಿದ್ದು, ಸದರಿ ವೇತನವನ್ನು ಪರಿಷ್ಕರಿಸಿ ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ವೇತನ ನಿಗದಿಪಡಿಸುವ ಬಗ್ಗೆ ಕ್ರಮ ವಹಿಸುವಂತೆ ಆರಕ್ಷಕ ಮಹಾನಿರ್ದೇಶಕರು, ಗೃಹರಕ್ಷಕ ದಳದ ಮಹಾಸಮಾದೇಷ್ಟರು ಮತ್ತು ನಿರ್ದೇಶಕರು ಪೌರರಕ್ಷಣೆ ಇವರಿಗೆ ಪತ್ರ ಬರೆದಿರುವುದಾಗಿ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ವೇತನ ಮತ್ತು ಕಾರ್ಯವೈಖರಿ:
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ತರಬೇತಿ ಪಡದ ಒಟ್ಟು 930 ಸಿಬ್ಬಂದಿಗಳಲ್ಲಿ 500 ಗೃಹರಕ್ಷಕರ ಸೇವೆಯನ್ನು ಪ್ರವಾಸಿ ಮಿತ್ರರಾಗಿ ರಾಜ್ಯದಲ್ಲ ಎಲ್ಲ ಜಿಲ್ಲೆಗಳ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ 3 ತಿಂಗಳಿಗೊಮ್ಮೆ ಸರದಿ ಆಧಾರದ ಮೇಲೆ ಬದಲಾಯಿಸುವ ಷರತ್ತಿಗೊಳಪಟ್ಟು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪ್ರತಿ ದಿನಕ್ಕೆ ಬೆಂಗಳೂರಿನಲ್ಲಿ ರೂ.455 ಹಾಗೂ ಇತರೆ ಸ್ಥಳಗಳಲ್ಲಿ ರೂ.380 ರಂತೆ ಕರ್ತವ್ಯ ಭತ್ಯೆಯನ್ನು ಹಾಗೂ ಮಾಹೆಯಾನ್ ರೂ.80 ಸ್ವಚ್ಛತಾ ಭತ್ಯೆಯಾಗಿ ಪ್ರವಾಸೋದ್ಯಮ ಇಲಾಖೆಯಿಂದಲೇ ಪಾವತಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಆದರೆ, ಇವರಿಗೆ ಇರುವ ಅನುಕೂಲಗಳು, ಸರ್ಕಾರ ಮುಂದೆ ಕೈಗೊಳ್ಳಬಹುದಾದ ಹೆಚ್ಚಿನ ಪರಿಹಾರದ ಬಗ್ಗೆ ಯಾವುದೇ ಆಶಾದಾಯಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹೀಗಾಗಿ ಪ್ರವಾಸಿ ಮಿತ್ರರ ಅನುಕೂಲಕ್ಕಾಗಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸರ್ವರೂ ಸಹಕರಿಸಬೇಕೆಂಬುದು ಪ್ರಜ್ಞಾವಂತರ ಮನವಿ
(ಕ್ಷಣ ಕ್ಷಣದ ಮಹತ್ವದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)