ಬೆಂಗಳೂರು

ರಾಷ್ಟ್ರೀಯ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌, ಕರ್ನಾಟಕ ಸೈಕ್ಲಿಸ್ಟ್‌ಗಳ ಪದಕ ಬೇಟೆ

ಸರಕಾರ್‌ ನ್ಯೂಸ್‌ ಬೆಂಗಳೂರ

ಭಾರತೀಯ ಸೈಕ್ಲಿಂಗ್ ಫೆಡರೇಶನ್ ಮಾನ್ಯತೆಯೊಂದಿಗೆ ಆಸ್ಸಾಮ ಸೈಕ್ಲಿಂಗ್ ಅಸೋಶಿಯೇಷನ್ ಆಶ್ರಯದಲ್ಲಿ ಗುರುವಾರ ಮುಕ್ತಾಯವಾದ 74ನೇ ಹಿರಿಯರ, 51ನೇ ಕಿರಿಯರ ಮತ್ತು 37ನೇ ಅತೀ-ಕಿರಿಯರ ರಾಷ್ಟ್ರೀಯ ಟ್ರ್ಯಾಕ್‌ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಸೈಕ್ಲಿಸ್ಟ್‌ಗಳು ಅಮೋಘ ಸಾಧನೆ ಮೆರೆದಿದ್ದಾರೆ.

2022 ಡಿಸೆಂಬರ್‌ 11ಕ್ಕೆ ಆರಂಭವಾಗಿ 15ಕ್ಕೆ ಮುಕ್ತಾಯಗೊಂಡ ಈ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಸೈಕ್ಲಿಸ್ಟ್‌ಗಳು 1 ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗಳಿಸಿಕೊಂಡಿದ್ದಾರೆ.

16 ವರ್ಷದೊಳಗಿನ ಬಾಲಕರ ವಿಭಾಗದ 7 ಕಿ ಮೀ. ಸ್ಕ್ಯಾಚ್ ರೇಸ್‌ನಲ್ಲಿ  ವಿಜಯಪುರದ ಸುಜಲ್ ಜಾಧವ ಬೆಳ್ಳಿಯ ಪದಕ ಪಡೆದಿದ್ದಾರೆ.

18  ವರ್ಷದೊಳಗಿನ ಬಾಲಕರ ವಿಭಾಗದ 200 ಮೀ.  ಸ್ಪಿಂಟ್ ರೇಸ್‌ನಲ್ಲಿ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಅಮರಾವತಿಯ  ಸಂಪತ್ ಪಾಸ್ಮೇಲ್  ಕಂಚಿನ  ಪದಕ ಹಾಗೂ 1 ಕಿ. ಮೀ. ಇಂಡಿವಿಜ್ಯುವಲ್ ಪರಶೂಟ್ ರೇಸ್‌ನಲ್ಲಿ ಬೆಳ್ಳಿಯ ಪದಕವನ್ನು ಮತ್ತು ಕೆರಿನ್ ರೇಸನಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿರುತ್ತಾನೆ.

18 ವರ್ಷದೊಳಗಿನ ಬಾಲಕರ ವಿಭಾಗದ  20 ಕಿ. ಮೀ.  ಪಾಯಿಂಟ್ ರೇಸ್‌ನಲ್ಲಿ  ವಿಜಯಪುರದ ಪ್ರತಾಪ ಪಡಚಿ ಕಂಚಿನ ಪದಕ ಪಡೆದುಕೊಂಡಿರುತ್ತಾನೆ.

ಮಹಿಳೆಯರ ವಿಭಾಗದ ಓಮ್ನಿಯಮ್ ರೇಸ್‌ನಲ್ಲಿ ಬೆಂಗಳೂರಿನ ಕೀರ್ತಿ ರಂಗಸ್ವಾಮಿ ಕಂಚಿನ ಪದಕವನ್ನು ಪಡೆದುಕೊಂಡರು.

18 ವರ್ಷದೊಳಗಿನ ಬಾಲಕರ 4 ಕಿ. ಮೀ. ಟೀಮ್ ಪರಶೂಟನಲ್ಲಿ ಸಂಪತ್ ಪಾಸ್ಮೇಲ್, ಪ್ರತಾಪ ಪಡಚಿ, ರಾಘವೇಂದ್ರ ವಂದಾಲ, ಸುಜಲ್ ಜಾಧವ ಮತ್ತು ಮಲ್ಲಿಕಾರ್ಜುನ ಯಾದವಾಡ ಇವರನ್ನೊಳಗೊಂಡ ರಾಜ್ಯ ತಂಡವು ಕಂಚಿನ ಪದಕ ಪಡೆದುಕೊಂಡಿದೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!