ಬೆಂಗಳೂರು

ಗ್ರಾಮ ಪಂಚಾಯಿತಿ ಸದಸ್ಯರಿಗೆ ಸಿಹಿ ಸುದ್ದಿ, ಸರ್ಕಾರದ ಹೊಸ ಆದೇಶದಲ್ಲೇನಿದೆ?

ಸರಕಾರ್‌ ನ್ಯೂಸ್‌ ಬೆಂಗಳೂರ

ಗ್ರಾಮ ಪಂಚಾತಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರ ಮಾಸಿಕ ಭತ್ಯೆ ಹೆಚ್ಚಿಸಬೇಕೆಂಬ ಬಹುದಿನದ ಬೇಡಿಕೆಗೆ ಕೊನೆಗೂ ಸರ್ಕಾರ ಸ್ಪಂದಿಸಿದೆ.

ವಿಧಾನ ಸಭೆ ಅಅಧಿವೇಶನಕ್ಕೆ ಮುನ್ನಾ ದಿನವೇ ಅಂದರೆ ಡಿಸೆಂಬರ್‌ 18ರಂದು ಮಹತ್ವದ ಆದೇಶ ಮಾಡಿರುವ ಸರ್ಕಾರ ಅಧ್ಯಕ್ಷರುಗಳಿಗೆ-6000, ಉಪಾಧ್ಯಕ್ಷರಿಗೆ -4000 ಹಾಗೂ ಸದಸ್ಯರಿಗೆ 2000 ರೂ.ಮಾಸಿಕ ವೇತನ ಗೌರವ ಧನ ಹೆಚ್ಚಿಸಿದೆ.

ಕರ್ನಾಟಕದಲ್ಲಿ ಕೇರಳ ಮಾದರಿ ಗೌರವಧನ ಜಾರಿಗೊಳಿಸಬೇಕೆಂಬ ಬೇಡಿಕೆ ಬಲವಾಗಿತ್ತು. ಕಳೆದೆರಡು ಅಧಿವೇಶನಗಳಲ್ಲಿ ಹಲವು ಬಾರಿ ಈ ಬಗ್ಗೆ ಚರ್ಚೆಯಾಗಿತ್ತು. ಈಗಿರುವ ವೇತನ ಯಾವುದಕ್ಕೂ ಸಾಲುವುದಿಲ್ಲ ಹೀಗಾಗಿ ಕೇರಳದಲ್ಲಿ ಅಧ್ಯಕ್ಷರಿಗೆ-13500, ಉಪಾಧ್ಯಕ್ಷರಿಗೆ-10 ಸಾವಿರ ಹಾಗೂ ಸದಸ್ಯರಿಗೆ 7 ಸಾವಿರ ರೂ.ಮಾಸಿಕ ಗೌರವಧನ ವ್ಯವಸ್ಥೆ ಜಾರಿಯಲ್ಲಿದೆ. ಹೀಗಾಗಿ ಅದೇ ಮಾದರಿ ಕರ್ನಾಟಕದಲ್ಲೂ ಜಾರಿಯಾಗಬೇಕೆಂಬ ಒತ್ತಾಯ ಕೇಳಿ ಬಂದಿತ್ತು.

ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲೂ ಮತ್ತೆ ಧ್ವನಿ ಕೇಳಿ ಬರಲಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಅಧಿವೇಶನ ಆರಂಭಕ್ಕೆ ಮುನ್ನಾ ದಿನವೇ ಗೌರವ ಧನ ಹೆಚ್ಚಿಸಿ ಆದೇಶಿಸಿದೆ.

ಅಂದ ಹಾಗೆ ಪ್ರಸ್ತುತ ರಾಜ್ಯದಲ್ಲಿ ಅಧ್ಯಕ್ಷರಿಗೆ -3000, ಉಪಾಧ್ಯಕ್ಷರಿಗೆ-2000 ಹಾಗೂ ಸದಸ್ಯರಿಗೆ -1000 ರೂ.ಮಾಸಿಕ ಗೌರವ ಧನ ನಿಗದಿಪಡಿಸಲಾಗಿತ್ತು. ಇದೀಗ ಆ ಮೊತ್ತ ಏರಿಕೆ ಮಾಡಿ ಸರ್ಕಾರ ಆದೇಶಿಸಿದೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!