ಬಾಗಲಕೋಟವಿಜಯಪುರ

ದ್ವೇಷ ಭಾಷಣ ಮಾಡದಂತೆ ತಡೆ, ಶಾಸಕ ಯತ್ನಾಳ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ?

ಸರಕಾರ ನ್ಯೂಸ್‌ ಬಾಗಲಕೋಟೆ

ಬಾಗಲಕೋಟೆ ಜಿಲ್ಲೆಯ, ತೇರದಾಳದಲ್ಲಿ ಅಲ್ಲಮ ಪ್ರಭು ದೇವಸ್ಥಾನದ ಉದ್ಘಾಟನೆ ಸಂದರ್ಭ ವಕ್ಫ್‌ಗೆ ಸಂಬಂಧಿಸಿದಂತೆ ಭಾಷಣ ಮಾಡಲೆತ್ನಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಭಕ್ತರೇ ಅಡ್ಡಿ ಪಡಿಸಿದ ಘಟನೆ ಭಾರಿ ಚರ್ಚೆಗೆ ಕಾರಣವಾಗಿದೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಹ ಭಾಷಣ ಮೊಟಕುಗೊಳಿಸಿ ವೇದಿಕೆಯಿಂದ ನಿರ್ಗಮಿಸಿದ್ದರು. ಈ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆಯಲ್ಲದೇ ಬಿಸಿ ಬಿಸಿ ಚರ್ಚೆಕೂಡ ನಡೆದಿದೆ. ಆದರೆ, ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್‌ ನಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ಯತ್ನಾಳ, ಸಮಾರಂಭದಲ್ಲಿ ವಕ್ಫ್ ಕುರಿತು ಮಾತನಾಡುವಾಗ ಕೆಲ ಕಾಂಗ್ರೆಸ್ ಕಾರ್ಯಕರ್ತರು ಅದಕ್ಕೆ ತಕಾರರು ವ್ಯಕ್ತಪಡಿಸಿ ತಮ್ಮ ಖೊಟ್ಟಿ ಜಾತ್ಯಾತೀತತೆಯನ್ನು ಪ್ರದರ್ಶಿಸಿದರು.  ರಾಜ್ಯದಾದ್ಯಂತ ವಕ್ಫ್ ನಿರಂಕುಶ, ಅಸಂವಿಧಾನಿಕ ನಡೆಯಿಂದ ರೈತರು ಬೇಸತ್ತಿದಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾವು ಅಹರ್ನಿಶಿ ಟೊಂಕಕಟ್ಟಿ ಕೆಲಸ ಮಾಡುತ್ತಿದ್ದರೆ, ಇದರ ಅರಿವೇ ಇಲ್ಲದಿರುವುದು ನಿಜಕ್ಕೂ ಖೇದನೀಯ ಎಂದಿದ್ದಾರೆ.

Basanagouda R Patil (Yatnal) on X: “ಬಾಗಲಕೋಟೆ ಜಿಲ್ಲೆಯ, ತೇರದಾಳದಲ್ಲಿ ಅಲ್ಲಮ ಪ್ರಭು ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ವಕ್ಫ್ ಕುರಿತು ಮಾತನಾಡುವಾಗ ಕೆಲ ಕಾಂಗ್ರೆಸ್ ಕಾರ್ಯಕರ್ತರು ಅದಕ್ಕೆ ತಕಾರರು ವ್ಯಕ್ತಪಡಿಸಿ ತಮ್ಮ ಖೊಟ್ಟಿ ಜಾತ್ಯಾತೀತತೆಯನ್ನು ಪ್ರದರ್ಶಿಸಿದರು. ರಾಜ್ಯದಾದ್ಯಂತ ವಕ್ಫ್ ನ ನಿರಂಕುಶ, ಅಸಂವಿಧಾನಿಕ ನಡೆಯಿಂದ ರೈತರು ಬೇಸತ್ತಿದಿದ್ದು ಇದರ ವಿರುದ್ಧ ಕ್ರಮ” / X

 ಮಠ, ಮಂದಿರಕ್ಕೆ ಮುಸಲ್ಮಾನರಿಂದ ದೇಣಿಗೆ ಪಡೆಯುವುದರಿಂದ  ವಕ್ಫ್ ಅನ್ಯಾಯ, ಅಕ್ರಮ, ಅಕೃತ್ಯ, ಅನಿಷ್ಟಗಳು ಕೊನೆಯಾಗುವುದಿಲ್ಲವೆಂದು ಮೊದಲು ಅರಿಯಬೇಕು. ಒಂದೆರೆಡು ಲಕ್ಷ ದೇಣಿಗೆ ಕೊಟ್ಟಿರುವ ಇವರು ಜಗಜ್ಯೋತಿ ಬಸವಣ್ಣನವರ ಅನುಭವ ಮಂಟಪವನ್ನೇ ಅತಿಕ್ರಮಿಸಿದ್ದಾರೆ  ಎಂಬುದು ಇವರಿಗೆ ಮಾನವರಿಕೆಯಾಗಲಿ ಎಂದಿದ್ದಾರೆ.

 ಮಠ, ಮಾನ್ಯಗಳು ವಕ್ಫ್ ನದ್ದು ಎಂದಾಗ ಇವರ ಧೀರತ್ವ, ಶೂರತ್ವ ಎಲ್ಲಿ ಅಡಗಿತ್ತು? ಪಹಣಿಯಲ್ಲಿ ರೈತರ ಹೆಸರು ಬದಲಿಸಿ ರಾತ್ರೋರಾತ್ರಿ ವಕ್ಫ್ ಇಂಡೀಕರಣವಾದಾಗ ಇವರು ಎಲ್ಲಿದ್ದರು ? ಖೊಟ್ಟಿ ಜಾತ್ಯತೀತತೆಯನ್ನು ಬಿಟ್ಟು ದೇಶಕ್ಕೆ ಮಾರಕವಾಗಿರುವ ವಕ್ಫ್ ವಿರುದ್ಧ ಇವರು ಮಾತನಾಡಲಿ.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯಗೆ ಯತ್ನಾಳ ಸಲಹೆ, ರಾಜೀನಾಮೆ ವಿಚಾರ ಕುರಿತು ಹೇಳಿದ್ದೇನು?

ಒಂದೆರೆಡು ಸಾವಿರ ರೂಪಾಯಿಗೆ ಆಸೆಗೆ, ಸಾವಿರಾರು ವರ್ಷಗಳಿಂದ ಅನ್ನ ನೀಡುತ್ತಿರುವ ಹೊಲ ಗದ್ದೆಗಳನ್ನು ಕಳೆದುಕೊಳ್ಳುವವರೆಗೂ ಇವರಿಗೆ ತಮ್ಮ ಖೊಟ್ಟಿ ಜಾತ್ಯಾತೀತಯೆ ಅರಿವು ಆಗುವುದಿಲ್ಲ. ಇವರಿಗೆ ತಾಯಿ ಸವದತ್ತಿ ಯಲ್ಲಮ್ಮ ಸದ್ಬುದ್ದಿಯನ್ನು  ನೀಡಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ್‌ ನ್ಯೂಸ್‌ ಸಬ್‌ಸ್ಕ್ರೈಬ್‌ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!