ವಿಜಯಪುರ

ಎನ್ ಟಿಪಿಸಿಯಲ್ಲಿ ಭೀಕರ ಅವಘಡ, 500 ಅಡಿ ಎತ್ತರದಿಂದ ಬಿದ್ದ ಕಾರ್ಮಿಕ, ಏನಾಗಿದೆ ಗೊತ್ತಾ?

ಸರಕಾರ ನ್ಯೂಸ್ ಬ.ಬಾಗೇವಾಡಿ

ಕೂಡಗಿಯ ಎನ್ ಟಿಪಿಸಿಯಲ್ಲಿ ಮಂಗಳವಾರ ಸಂಜೆ ಬೃಹತ್ ಅವಘಡ ಸಂಭವಿಸಿದೆ.

ವಿದ್ಯುತ್ ಸ್ಥಾವರ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಉತ್ತರ ಪ್ರದೇಶ ಮೂಲದ ಕಾರ್ಮಿಕನೋರ್ವ ಸುಮಾರು 500 ಅಡಿ ಎತ್ತರದಿಂದ ಬಿದ್ದಿದ್ದಾನೆ.

ಗಂಭೀರ ಗಾಯಗೊಂಡಿದ್ದ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾ‌ನೆ.

ಉತ್ತರ ಪ್ರದೇಶ ರಾಜ್ಯದ ಘಾಜಿಪುರ ಜಿಲ್ಲೆಯ ಉಕ್ರಾವ್ ಗ್ರಾಮದ ಕಿಸನ್ ಭಾರದ್ವಾಜ್ (31) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ದುರ್ದೈವಿ.

ಕಾರ್ಮಿಕ ನ ಸಾವಿನಿಂದ ಆಕ್ರೋಶಗೊಂಡ ಸಿಬ್ಬಂದಿ ಬುಧವಾರ ಬೆಳಗಾಗುತ್ತಿದ್ದಂತೆಯೇ ಎನ್ ಟಿಪಿಸಿ ಪ್ರವೇಶ ದ್ವಾರದ ಎದುರು ಉತ್ತರ ಪ್ರದೇಶ ಮೂಲದ ಕಾರ್ಮಿಕರ ನೇತೃತ್ವದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಕೂಡಗಿ ಎನ್ ಟಿಪಿಸಿ ಠಾಣಾ ಪಿಎಸ್ ಐ ಯತೀಶ ಕೆ.ಎನ್, ಮತ್ತವರ ಸಿಬ್ಬಂದಿ ಭೇಟಿ ನೀಡಿ ಪ್ರತಿಭಟನಾ ನಿರತರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಮಾಡಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!