ವಿಜಯಪುರ

ನಾಗಠಾಣ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ, ಶಾಸಕ ಡಾ.ದೇವಾನಂದ ಬಿಚ್ಚಿಟ್ಟ ಮನದಾಳದ ಮಾತು ಇಲ್ಲಿದೆ ನೋಡಿ….

ವಿಜಯಪುರ: ನಾಗಠಾಣ ವಿಧಾನ ಸಭೆ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿದ್ದು ಶಾಸಕ ಡಾ.ದೇವಾನಂದ ಚವಾಣ್ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳಿಗೆ ಶಾಸಕ ಡಾ.ದೇವಾನಂದ ಚವಾಣ್ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.

ವಾರ್ಡ್ ನಂ-12 ರ ಗಚ್ಚಿನಕಟ್ಟಿ ಕಾಲನಿಯ ಹಿಟ್ಟಿನ ಗಿರಣಿ ಹಾಗೂ ಓಂ ಶಾಂತಿ ಕೇಂದ್ರದ ಹತ್ತಿರ ರಸ್ತೆ ಹಾಗೂ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದ ಅವರು, ರಾಜ್ಯದಲ್ಲಿ ಜೆಡಿಎಸ್ ಆಡಳಿತದಲ್ಲಿ ಇರದೇ ಇದ್ದರೂ  ನಾಗಠಾಣ ಕ್ಷೇತ್ರಕ್ಕೆ ಅನುದಾನ ತಂದು ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಅನೇಕರ ವಿರೋಧ, ಅಭಿವೃದ್ಧಿಗೆ ಅಡ್ಡಿ, ಕ್ಷೇತ್ರದ ಯೋಜನೆಗಳನ್ನು ಹೈಜಾಕ್ ಮಾಡುತ್ತಿದ್ದರೂ ಅದನ್ನು ಲೆಕ್ಕಿಸದೇ ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತಿದ್ದೇನೆ. ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಬೇಕೆಂದು ಜನರಿಗೆ ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ ಸೌಲಭ್ಯ ಒದಗಿಸಲಾಗಿದೆ ಎಂದರು.
ಮುಖಂಡರಾದ ಬಿ.ಆರ್. ಪಾಟೀಲ, ರಮೇಶ ಪಾಟೀಲ, ಎಸ್.ಎಸ್. ಚೌಕಿಮಠ, ಸಂತೋಷ ರಾಯಕರ, ಡಾ.ವಾಲಿ, ಶಿವಯ್ಯ ಉಕಮನಾಳ, ಎಂ.ಎಸ್. ನಿಂಬರಗಿ, ಮಹಾದೇವ ಹಿರೋಳ್ಳಿ, ಎಸ್.ಸಿ. ಸಾಸಟ್ಟಿ, ಚಂದ್ರಶೇಖರ ಬಡಗೇರ, ಮಲ್ಲಿಕಾರ್ಜುನ ಬಡಗೇರ, ಭೀಮಪ್ಪ ಪೋಳ, ಶೇಖರ ಬಡಗೇರ, ಕುಮಾರ ಮಾಣೆ, ರವಿ ಮದರಿ, ಪ್ರವೀಣ ಬಡಗೇರ, ಮಹೇಶ ಹಡಪದ, ಆನಂದ ಹಡಪದ, ರವಿ ಬಿರಾದಾರ, ರವಿ ತುಪ್ಪದ ಮತ್ತಿತರರಿದ್ದರು. 

error: Content is protected !!