ವಿಜಯಪುರ

ಎಚ್ಚೆತ್ತುಕೊಂಡ ತಳವಾರ ಸಮುದಾಯ, ಹಳ್ಳಿ-ಹಳ್ಳಿಗಳಲ್ಲಿ ಜನಜಾಗೃತಿ ಸಭೆ, ಕೈಗೊಂಡ ನಿರ್ಣಯಗಳೇನು?

ಸರಕಾರ ನ್ಯೂಸ್ ಇಂಡಿ

ತಳವಾರ ಸಮುದಾಯದಿಂದ ಮಹರ್ಷಿ ವಾಲ್ಮೀಕಿ ಜಯಂತಿ ಅದ್ದೂರಿಯಾಗಿ ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತಲ್ಲದೇ, ಪರಿಶಿಷ್ಟ ಪಂಗಡಕ್ಕೆ ಸರ್ಕಾರದಿಂದ ಸಿಗಬೇಕಾದ ಮೂಲ ಸೌಕರ್ಯಗಳ ಬಗ್ಗೆ ಜನಜಾಗೃತಿ ಮೂಡಿಸಲಾಯಿತು.

ಅಗರಖೇಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯ 10 ಹಳ್ಳಿಯ ಜನ ಸೇರಿಕೊಂಡು ಸುದೀರ್ಘವಾಗಿ ಸಭೆ ನಡೆಸಿ ಇಂಥದ್ದೊಂದು ಚರ್ಚೆಗೆ ಮುನ್ನುಡಿ ಬರೆದರು.

ಸಭೆಯಲ್ಲಿ ಸರ್ಕಾರದಿಂದ ಪರಿಶಿಷ್ಟ ಪಂಗಡದ ತಳವಾರ ಸಮುದಾಯಕ್ಕೆ ಸಿಗಬೇಲಾದ ಸೌಲಭ್ಯಗಳ ಕುರಿತು ಚರ್ಚಿಸಲಾಯಿತು. ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸಮುದಾಯವನ್ನು ಬಲಿಷ್ಠಗೊಳಿಸುವ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಹಿರಿಯರು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡರು.

ತಳವಾರ ಸಮುದಾಯ ಶೋಷಿತ ಸಮುದಾಯವಾಗಿದ್ದು, ಅತ್ಯಂತ ಹಿಂದುಳಿದಿದೆ. ಇದೇ ಕಾರಣಕ್ಕೆ ಸರ್ಕಾರ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹಿರಿಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಅಲ್ಲದೇ, ಈ ವರ್ಷ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.

ತಳವಾರ ಸಮಾಜ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೋಮು ಜಮಾದಾರ, ಗೌರವ ಅಧ್ಯಕ್ಷರ ಶಿವಶರಣ ನಾಟಿಕಾರ, ಪದಾಧಿಕಾರಿಗಳಾದ ರೇವಣ್ಣ ಹತ್ತಳಿ, ಚಂದ್ರು ತಳವಾರ, ನಾರಾಯಣ ವಾಲಿಕಾರ, ಅಭಿಷೇಕ್, ಶ್ರೀನಾಥ್ ಕೌಲಗಿ,ಜಮಾದಾರ,ಭೀಮು ನಾಯಿಕೋಡಿ ಚಂದು, ನಾಗನಾಥ ಕೌಲಗಿ,ದ್ಯಾಮಣ್ಣ ತಳವಾರ,ಡೊಂಗ್ರೋಜಿ, ಶಾಂತು ನಾಟಿಕಾರ್,ಸಿದ್ದು ಕೋಳಿ, ರಾಮ ಹೊನ್ನೂರ,ಹೀಗೆ ಮೈನಹಳ್ಳಿ, ಆಳೂರ, ಪಡನೂರ್, ಚಿಕ್ಕಮನೂರ, ಗುಬ್ಬೆವಾಡ, ಶಿರಗುರ ಇನಾಮ್, ಖೇಡಗಿ ಇಂಗಳಗಿ ಮುಂತಾದವರು ಭಾಗವಹಿಸಿ ಸಭೆಯನ್ನು ಯಶಸ್ವಿ ಗೊಳಿಸಿದರು.

error: Content is protected !!