ಡಿಕೆಶಿ ಕನಸಿಗೆ ಕೊಳ್ಳಿ ಇಟ್ಟರಾ ಸತೀಶ ಜಾರಕಿಹೊಳಿ, ವಾಟ್ ಎ ಟ್ರ್ಯಾಜಡಿ?
ಸರಕಾರ ನ್ಯೂಸ್ ಬೆಂಗಳೂರ
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸದ್ದು ಜೋರಾಗುತ್ತಿದ್ದಂತೆ ಕಾಂಗ್ರೆಸ್ ನಲ್ಲಿ ಸಿಎಂ ಗಾದಿಗೆ ತೀವ್ರ ಪೈಪೋಟಿ ಆರಂಭಗೊಂಡಿರುವ ಗುಸುಗುಸು ಕೇಳಿಬರುತ್ತಿದೆ.
ಅಂತೆಯೇ ಸತೀಶ ಜಾರಕಿಹೊಳಿ ಅವರು ತೆರೆ ಮರೆಯಲ್ಲಿ ದಲಿತ ನಾಯಕರನ್ನು ಭೇಟಿಯಾಗುತ್ತಿದ್ದಾರೆಂದು ಬಿಜೆಪಿ ಆರೋಪಿಸಿದೆ.
ಈ ಬಗ್ಗೆ ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು,
ಪ್ರಮಾಣ ವಚನ ಸ್ವೀಕರಿಸುವ ಪತ್ರವನ್ನು ಕಿಸೆಯಲ್ಲಿ ಇಟ್ಟುಕೊಂಡು ಓಡಾಡುತ್ತಿರುವ ಆ ದಿನಗಳ ಸಿಡಿ ಮಾಸ್ಟರ್ ಅವರಿಗೆ ಬೆಳಗಾವಿಯ ಸತೀಶ ಜಾರಕಿಹೊಳಿ ಗುನ್ನಾ ಇಟ್ಟಿದ್ದಾರೆ ಎಂದು ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ.
ಏರ್‌ಪೋರ್ಟ್ ರಸ್ತೇಲಿ ಪೋಸ್ಟರ್ ಹಾಕ್ಕೊಂಡು ಪೋಸ್ ಕೊಟ್ಟು ಬೆಂಗಳೂರಿನಲ್ಲಿ ಬಿಟ್ಟಿ ಪ್ರಚಾರ ಪಡೆಯುವುದಿಲ್ಲ, ಯಾರಿಗೂ ಹೆದರುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಡಿಕೆ ಶಿವಕುಮಾರ್ ಅವರ ಸಿಎಂ ಆಸೆಗೆ ಎಳ್ಳುನೀರು ಬಿಟ್ಟಿದ್ದಾರೆ.
ದಸರಾ ನಂತರ ಭ್ರಷ್ಟ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡದೆ ಇದ್ದರೂ ಹೈಕಮಾಂಡ್ ಕುರ್ಚಿಯಿಂದ ಇಳಿಸುವುದು ಪಕ್ಕಾ ಆಗಿರುವುದರಿಂದ ಕಾಂಗ್ರೆಸ್ ದ ನಾಯಕರ ನಡುವೆ ಕುರ್ಚಿಗಾಗಿ ಕಾಳಗ ಶುರುವಾಗಿದೆ ಎಂದು ಬಿಜೆಪಿ ಬರೆದುಕೊಂಡಿದೆ.