ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆ, ಭವಿಷ್ಯ ನುಡಿದರಾ ಕೆ.ಎಸ್.ಈಶ್ವರಪ್ಪ?
ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದರು. ಮುಡಾ ಹಾಗೂ ವಾಲ್ಮೀಕಿ ಹಗರಣದ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಈಶ್ವರಪ್ಪ ಕಿಡಿ ಕಾರಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಅಂತಾ ಒಪ್ಪುತ್ತೀರಾ? ಕಾಂಗ್ರೆಸ್ ರಾಜಕಾರಣ ಅಸಹ್ಯ. ಯಾವ ಪದ ಬಳಸಬೇಕೆಂಬುದೇ ತಿಳಿಯುತ್ತಿಲ್ಲ ಎಂದರು. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣದಲ್ಲಿ ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಆಗಿದೆ, ಹಿಂದುಳಿದ ಹಾಗೂ ದಲಿತರಿಗೆ ಕಾಂಗ್ರೆಸ್ ಮೋಸ ಮಾಡಿ ಕೇಂದ್ರ, ರಾಜ್ಯದಲ್ಲಿ ಆಡಳಿತ ಮಾಡಿದ್ದಾರೆ. ನೇರವಾಗಿ ಕಾಂಗ್ರೆಸ್ ಬೆತ್ತಲೆ ಆಗಿದೆ ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ ಒಂದಲ್ಲ, ಎರಡಲ್ಲ, ಹತ್ತಾರೂ ಹಗರಣಗಳಾಗಿವೆ. ಸಾಕ್ಷಿಗಳು ಬೇಗ ಸಿಗುತ್ತೇವೆಂದು ಸಿಬಿಐ ತನಿಖೆಗೆ ಕೊಡುತ್ತಿಲ್ಲ. ಬೆಲೆಬಾಳುವ 14 ಸೈಟ್‌ಗಳನ್ನು ಸಿಎಂ ಸಿದ್ದರಾಮಯ್ಯ ತೆಗೆದುಕೊಂಡಿದ್ದಾರೆ. ಚುನಾವಣೆಯಲ್ಲಿ ಎಂಟುವರೆ ಕೋಟಿ ಘೋಷಣೆ ಮಾಡಿದ್ದಾರೆ. ಆದರೆ, ಮುಡಾ ಹಗರಣ ಬಂದ್ಮೇಲೆ 60 ಕೋಟಿ ಕೊಟ್ಟು ಬಿಡಿ ನಾನು ಸುಮ್ಮನೆ ಆಗ್ತೇನಿ ಎಂದಿದ್ದಾರೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆ ಎಂದರು.
ಬಿಜೆಪಿಯ 22 ಹಗರಣದ ಬಗ್ಗೆ ಕಾಂಗ್ರೆಸ್‌ನವರು ಹೇಳಿದ್ದಾರೆ. ಆ ಬಗ್ಗೆ ಪಟ್ಟಿ ಬಿಡುಗಡೆ ಮಾಡುವಂತೆ ಸವಾಲ್ ಹಾಕಿದ ಈಶ್ವರಪ್ಪ ಅವರು, ಬಿಜೆಪಿಯ 22 ಹಗರಣ, ವಾಲ್ಮೀಕಿ ನಿಗಮ, ಮುಡಾ ಹಗರಣ ಸಿಬಿಗೆ ಕೊಡುವಂತೆ ಒತ್ತಾಯ ಮಾಡಿದರು.