ಆನ್ ಲೈನ್ ದೋಖಾ; ಒಟ್ಟು 1.88 ಕೋಟಿ ರೂಪಾಯಿ ಕಳೆದುಕೊಂಡ ಗುತ್ತಿಗೆದಾರ…!!!
ಸರಕಾರ ನ್ಯೂಸ್ ವಿಜಯಪುರ
ಟ್ರೇಡಿಂಗ್ ವೆಬ್ ಸೈಟ್ ನಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿವಾರ
ಶೇ. 75 ರಷ್ಟು ಲಾಭಾಂಶ ಕೊಡುವುದಾಗಿ ನಂಬಿಸಿ 1.88 ಕೋಟಿ ರೂಪಾಯಿ ವಂಚನೆಗೈದ ಪ್ರಕರಣ ಬೆಳಕಿಗೆ ಬಂದಿದೆ.
ಬಸವನಬಾಗೇವಾಡಿಯ ನಂದಿ ಬಡಾವಣೆಯ ರಾವುತಪ್ಪ ಶಿವಾನಂದ ಕತ್ನಳ್ಳಿ ಎಂಬುವರು ವಂಚನೆಗೆ ಒಳಗಾಗಿದ್ದಾರೆ.
ವೃತ್ತಿಯಲ್ಲಿ ಗುತ್ತಿಗೆದಾರನಾಗಿರುವ ರಾವುತಪ್ಪ ಇವರಿಗೆ ಕೆಪೆಕ್ಸ್ ಡಾಟ್ ಕಾಮ್ ಎಂಬ ವೆಬ್ ಸೈಟ್ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಡಾಲರ್, ಗೋಲ್ಡ್, ಕ್ರೂಡ್ ಆಯಿಲ್, ಕರೆನ್ಸಿ ಪೇರ್, ಟ್ರೇಡ್ ಮಾಡಿ ಹೂಡಿಕೆ ಮಾಡಿದ ಗಣಕ್ಕೆ ಪ್ರತಿಶತಃ 75 ರಷ್ಟು ಪ್ರತಿ ವಾರಕ್ಕೆ ಲಾಭಾಂಶ ಕೊಡುವುದಾಗಿ ನಂಬಿಸಿದ್ದಾರೆ.
ಅದನ್ನು ನಂಬಿದ ರಾವುತಪ್ಪ ತಮ್ಮ ವಿವಿಧ ಖಾತೆಗಳಿಂದ ಒಟ್ಟು 1.88 ಕೋಟಿ ರೂಪಾಯಿ ಹಣ ಹೂಡಿಕೆ ಮಾಡಿದ್ದಾರೆ. ಆದರೆ, ಯಾವುದೇ ಲಾಭಾಂಶ ಕೊಡದೇ, ತೊಡಗಿಸಿದ ಹಣವೂ ನೀಡದೇ ವಂಚನೆ ಮಾಡಲಾಗಿದೆ. ಈ ಬಗ್ಗೆ ರಾವುತಪ್ಪ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.