ಬಿಎಸ್ ವೈ ಎಂದರೇನು ಗೊತ್ತಾ? ಹೊಸ ಲಾಂಗ್ ಫಾರ್ಮ್ ಕೊಟ್ಟ ಯತ್ನಾಳ ವಿಶ್ಲೇಷಣೆಯೇ ವಿಚಿತ್ರ….ವಿಭಿನ್ನ
ಸರಕಾರ ನ್ಯೂಸ್ ವಿಜಯಪುರ
ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಸಮಾವೇಶ ಕೇವಲ ಮೂರು ಕುಟುಂಬಗಳ ಸಮಾವೇಶ ಎಂದು ಬಣ್ಣಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅದಕ್ಕೆ “ಬಿಎಸ್ ವೈ” ಸಮಾವೇಶ ಎಂದು ಹೆಸರಿಸಿದ್ದಾರೆ.
ಬಿ ಎಂದರೆ ಭೀಮಣ್ಣ ಖಂಡ್ರೆ, ಎಸ್ ಎಂದರೆ ಶಾಮನೂರು ಶಿವಶಂಕರಪ್ಪ ಹಾಗೂ ವೈ ಎಂದರೆ ಯಡಿಯೂರಪ್ಪ ಎಂದು ವಿನೂತನವಾಗಿ ಹೆಸರಿಸಿದ್ದಾರೆ.
ವೀರಶೈವ ಲಿಂಗಾಯತ ಮಹಾಸಭಾ ಕೆಲ ಕುಟುಂಬಗಳ ಆಸ್ತಿಯಾಗಿದೆ. “ಬಿಎಸ್ ವೈ” ಬೀಗರು- ಪರಿವಾರದವರೇ ಸೇರಿದ್ದಾರೆ.
ಇವರೆಲ್ಲ ತಮ್ಮ ಜಾತಿ ಕಾಲಂ ನಲ್ಲಿ ಏನು ಬರೆಸಿದ್ದಾರೆ ಎಂಬುದನ್ನು ಮೊದಲು ಹೇಳಲಿ. ಅವರ ಜಾತಿ ಕಾಲಂದಲ್ಲಿ ವೀರಶೈವ ಲಿಂಗಾಯತ ಎಂದು ಬರೆಯಿಸಿಲ್ಲ. ಇವರೆಲ್ಲ ಫಲಾನುಭವಿಗಳು ಇದ್ದಾರೆ. ಪಂಚಮಸಾಲಿ ಸೇರಿದಂತೆ ಇತರ ಜನಾಂಗದವರಿಗೆ ವೀರಶೈವ ಲಿಂಗಾಯತ ಎಂದು ಬರೆಯಿಸಲು ಹೇಳುತ್ತೀರಿ….ಈ ಕಾರಣದಿಂದ ನಮಗೆ ಹಿಂದುಳಿದ ಯಾವುದೇ ಸೌಲಭ್ಯಗಳು ಸಿಗಲ್ಲ. ಈ ವಿಚಾರದಲ್ಲಿ ಕೂಡಲಸಂಗಮ ಸ್ವಾಮೀಜಿ ಸೇರಿದಂತೆ ಇತರರು ಸೇರಿ ನಿರ್ಧಾರ ಮಾಡುತ್ತೇವೆ ಎಂದರು.
ಬಿಜೆಪಿ ಶಾಸಕ ಯತ್ನಾಳ ಮೂರನೇ ಟಿಪ್ಪು ಸುಲ್ತಾನ್, ಸಚಿವ ಎಂ.ಬಿ. ಪಾಟೀಲ ತಿರುಗೇಟು
ನಾವು ಜಾತಿ ಕಾಲಂನಲ್ಲಿ ಹಿಂದೂ ಪಂಚಮಸಾಲಿ ಬರಿಸಬೇಕೋ ಹಿಂದೂ ಲಿಂಗಾಯಿತ ಎಂದು ಬರೆಸಬೇಕೆಂಬುದನ್ನು ಶೀಘ್ರವಾಗಿ ಚರ್ಚೆ ಮಾಡುತ್ತೇವೆ. ಉಪಜಾತಿಗಳನ್ನ ಜಾತಿ ಕಾಲಂನಲ್ಲಿ ನಮೂದು ಮಾಡಿದರೆ ಮೀಸಲಾತಿಯಲ್ಲಿ ನಮಗೆ ಸೌಲಭ್ಯ ಸಿಗುತ್ತದೆ ನಾವು ವೀರಶೈವ ಲಿಂಗಾಯತ ಎಂದು ಬರೆಸುವುದು, ಅವರು
ಲಾಭ ಪಡೆದುಕೊಳ್ಳುವರು ಎಂದರೆ ಅದಕ್ಕೆ ನಮ್ಮ ಒಪ್ಪಿಗೆ ಇಲ್ಲ.
ಲಿಂಗಾಯತ ಸಮಾಜದಲ್ಲಿರುವ ಉಪಜಾತಿಯವರು ಯಾರು ವೀರಶೈವ ಲಿಂಗಾಯತ ಎಂದು ಜಾತಿ ಕಾಲಂನಲ್ಲಿ ಬರೆಯಿಸಿಲ್ಲ. ಹೀಗಾಗಿ ಜಾತಿ ಗಣತಿಯಲ್ಲಿ ವೀರಶೈವ ಲಿಂಗಾಯತರ ಸಂಖ್ಯೆ ಕಡಿಮೆಯಾಗಿದೆ. ವೀರಶೈವ ಲಿಂಗಾಯತ ಮಹಾಸಭಾ ಮಹಾದಿವೇಶನದ ನಿರ್ಣಯ ಕುರಿತು ನಾವು ಚರ್ಚೆ ಮಾಡುತ್ತೇವೆ ಎಂದರು.
ನಾವು ಈ ದೇಶದಲ್ಲಿ ಇರುತ್ತೇವೆ ಎಂದರೆ ಮೊದಲು ನಾವು ಹಿಂದೂಗಳು. ವೀರಶೈವ ಲಿಂಗಾಯತ ಪ್ರತ್ಯೇಕ ಮಾಡಿ ದೇಶದಲ್ಲಿ ಮತ್ತೊಂದು ಸಂಘರ್ಷಕ್ಕೆ ನಾವು ಅವಕಾಶ ಕೊಡಲ್ಲ.
ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಯಿಸಿದರೆ ನಮಗೆ ಸೌಲಭ್ಯ ಸಿಗುತ್ತದೆಯೋ ಇಲ್ಲವೋ…ಮಹಾ ಅಧಿವೇಶನದ ವೇದಿಕೆಯಲ್ಲಿ ಓಬಿಸಿ ಮೀಸಲಾತಿ ಬೇಡುತ್ತಾರೆ. ಆದರೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಒಬಿಸಿ ಮೀಸಲಾತಿ ಯಾಕೆ ನೀಡಲಿಲ್ಲ? ಎಂದು ಪ್ರಶ್ನೆ ಮಾಡಿದ ಯತ್ನಾಳ
ವಿಜಯೇಂದ್ರ ನಮ್ಮ ಪೂಜ್ಯ ತಂದೆಯವರು ನಾಲ್ಕು ಸಲ ಸಿಎಂ ಆಗಿದ್ದರು ಎಂದು ಹೇಳಿದರು.
ಪೂಜ್ಯ ತಂದೆಯವರಾದ ಮಗ ಪೂಜ್ಯನೇ ತಾವು ಏಕೆ ವೀರಶೈವ ಲಿಂಗಾಯತರನ್ನು ಓಬಿಸಿಗೆ ಸೇರಿಸಲು ಕ್ಯಾಬಿನೆಟ್ ನಿರ್ಣಯ ಮಾಡಿ ಕೇಂದ್ರಕ್ಕೆ ಕಳುಹಿಸಲಿಲ್ಲ?
ಈ ಕುರಿತು ರಾಜ್ಯದ ವೀರಶೈವ ಲಿಂಗಾಯತರಿಗೆ ಯಡಿಯೂರಪ್ಪ ಸ್ಪಷ್ಟನೆ ನೀಡಬೇಕು. ಸುಮ್ಮನೆ ಡೋಂಗಿ ಮಾಡಿ ನಾಟಕ ಮಾಡಿ ಲಿಂಗಾಯತ ಲೀಡರ್ ಆಗೋಕೆ ಸಮಾವೇಶ ಮಾಡುತ್ತಾರೆ.
ವೀರಶೈವ ಲಿಂಗಾಯತರಿಗಾಗಿ ವೀರಶೈವ ಲಿಂಗಾಯತ ಮಹಾಸಭಾದವರು ರಾಜ್ಯದಲ್ಲಿ ಯಾವ ಹೋರಾಟ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಎಲ್ಲಾದರೂ ಧರಣಿ ಕುಳಿತಿದ್ದಾರಾ? ಸಿಎಂ ಆದವರನ್ನು ಕರೆಯುವುದು, 4000 ಜನರನ್ನು ಸೇರಿಸುವುದು,
ಒಂದು ಮನವಿ ಕೊಡುವುದು ಬಿಟ್ಟರೆ ವೀರಶೈವ ಮಹಾಸಭಾದಿಂದ ಏನು ಲಾಭವಾಗಿದೆ? ಎಂದರು.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)