ವಿಜಯಪುರ

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಬೆಂಕಿಗಾಹುತಿ, ಧಗಧಗಿಸಿದ ಲಾರಿ ಕಂಡು ಬೆಚ್ಚಿ ಬಿದ್ದ ಜನ, ಅಯ್ಯೋ…..ಚಾಲಕನಿಗೇನಾಯಿತು?

ಸರಕಾರ ನ್ಯೂಸ್ ವಿಜಯಪುರ

ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ವಾಹನಗಳು ಬೆಂಕಿಗೆ ಆಹುತಿಯಾಗುತ್ತಿದ್ದು, ಕೆಲ ದಿನಗಳ ಹಿಂದಷ್ಟೇ ಖಾಸಗಿ ಬಸ್ ಭಸ್ಮವಾದ ಬೆನ್ನಲ್ಲೆ ಲಾರಿ ಕೂಡ ಧಗಧಗಿಸಿದೆ.

ಗೊಳಸಂಗಿ ಸಮೀಪದ ರಾಷ್ಟ್ರೀಯ ಹೆದ್ದಾರಿ-50 ರ ಉಣ್ಣಿಬಾವಿ ಕ್ರಾಸ್ ಹತ್ತಿರ ದಾಬಾವೊಂದರ ಬಳಿ ಹೊತ್ತಿ ಉರಿದ ಲಾರಿ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ.

ಬೆಳ್ಳೆಂಬೆಳಗ್ಗೆ ಹೊತ್ತಿ ಉರಿದ ಬಸ್, ಸುಟ್ಟು ಕರಕಲಾದ ಬಸ್ ನಲ್ಲಿದ್ದವರು ಎಷ್ಟು ಜನ? ಯಾರಿಗೆ ಏನಾಯಿತು? ಇಲ್ಲಿದೆ ಶಾಕಿಂಗ್ ನ್ಯೂಸ್

ದಾಬಾ ಬಳಿ ತಮಿಳುನಾಡು ಮೂಲದ ಲಾರಿ ನಿಲ್ಲಿಸಿ ಅಡುಗೆ ಮಾಡುತ್ತಿರುವಾಗ ಬೆಂಕಿ ಹೊತ್ತಿಕೊಂಡಿದೆ. ಕ್ಷಣಮಾತ್ರದಲ್ಲಿ ಬೆಂಕಿ ಕೆನ್ನಾಲಿಗೆ ಚಾಚಿದ್ದು ಇಡೀ ಲಾರಿ ಸುಟ್ಟು ಕರಕಲಾಗಿದೆ‌.

ಆಗಸದೆತ್ತರಕ್ಕೆ ಚಿಮ್ಮುತ್ತಿದ್ದ ಬೆಂಕಿ ಕಂಡು ಜನ ಆತಂಕಗೊಂಡರು. ಘಟನೆಯಲ್ಲಿ ಚಾಲಕನಿಗೆ ಕೈ ಕಾಲು ಮತ್ತಿತರ ಭಾಗಕ್ಕೆ ಗಾಯಗಳಾಗಿವೆ.

ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!