ಪುಕ್ಸಟ್ಟೆ ಅಕ್ಕಿ ಕೊಟ್ಟರೆ ಹೀಗಾ ಮಾಡೋದು? ಅನ್ನಭಾಗ್ಯ ಅಕ್ಕಿ ಬಿಸಿನೆಸ್ ಹೇಗಿದೆ ನೋಡಿ….!
ಸರಕಾರ ನ್ಯೂಸ್ ವಿಜಯಪುರ
ಸರ್ಕಾರ ಬಡವರಿಗೆ ಪುಕ್ಸಟ್ಟೆ ಅಕ್ಕಿ ನೀಡುತ್ತಿದ್ದರೆ ಅದನ್ನೇ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆ ಕೂಡ ಹೆಚ್ಚಾಗಿದೆ !
ಸರ್ಕಾರ ಬಡವರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದರೆ ಅದನ್ನೇ ಕೆಲವರು ಬಿಸಿನೆಸ್ ಮಾಡಿಕೊಂಡಿದ್ದಾರೆಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಅನ್ನ ಭಾಗ್ಯ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ಜಾಲ ಕೂಡ ಹೆಚ್ಚಾಗಿದೆ.
ಇಂಥದ್ದೇ ಒಂದು ಪ್ರಕರಣವನ್ನು ಆದರ್ಶ ನಗರ ಠಾಣೆ ಪೊಲೀಸರು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯವರು ಭೇದಿಸಿದ್ದು ಅನಧಿಕೃತವಾಗಿ ಅಕ್ಕಿ ಸಾಗಿಸುತ್ತಿದ್ದವರನ್ನುಬಂಧಿಸಿದ 4,12,960 ರೂ.ಮೌಲ್ಯದ ಸಾಮಗ್ರಿ ವಶಕ್ಕೆ ಪಡೆದಿದ್ದಾರೆ.
ಅಲಿಯಾಬಾದ್ ಕಾರ್ಯಾಚರಣೆ ಪೂರ್ಣ, ಸತ್ತವರ ಒಟ್ಟು ಸಂಖ್ಯೆ ಎಷ್ಟು ಗೊತ್ತಾ? ಹೇಗಿತ್ತು ಕಾರ್ಯಾಚರಣೆ?
ಸೋಲಾಪುರ ರಸ್ತೆಗೆ ಅಂಟಿಕೊಂಡಿರುವ ಹುಂಡೇಕರ ಪೆಟ್ರೋಲ್ ಪಂಪ್ ಹತ್ತಿರ ಲಾರಿ ನಂ. ಕೆಎ 29/ಸಿ-0812 ರಲ್ಲಿ ಅಕ್ಕಿ ತುಂಬಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ರಾಹುಲ್ ಶಂಕರ ಪವಾರ (34) ಹಾಗೂ ನಾಗೇಶ ಲಕ್ಷ್ಮಣ ವಡ್ಡರ (34) ಬಂಧಿತ ಆರೋಪಿಗಳು. ಇವರು ಹಳ್ಳಿಗಳಿಗೆ ಭೇಟಿ ನೀಡಿ ಕಡಿಮೆ ದರದಲ್ಲಿ ಅಕ್ಕಿ ಖರೀದಿಸಿ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್‌ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)