ಅಲಿಯಾಬಾದ್ ಕಾರ್ಯಾಚರಣೆ ಪೂರ್ಣ, ಸತ್ತವರ ಒಟ್ಟು ಸಂಖ್ಯೆ ಎಷ್ಟು ಗೊತ್ತಾ? ಹೇಗಿತ್ತು ಕಾರ್ಯಾಚರಣೆ?
ಸರಕಾರ ನ್ಯೂಸ್ ವಿಜಯಪುರ
ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಅಲಿಯಾಬಾದ್ ಕೈಗಾರಿಕೆ ವಲಯದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಕೊನೆಗೂ ಮುಕ್ತಾಯಗೊಂಡಿದ್ದು, ಒಟ್ಟು ಸಾವಿನ ಸಂಖ್ಯೆ ಏಳಕ್ಕೆ ತಲುಪಿದೆ.
ಅಲಿಯಾಬಾದ್ ಕೈಗಾರಿಕೆ ಪ್ರದೇಶದ ರಾಜಗುರು ಗೋದಾಮಿನಲ್ಲಿ ಸೋಮವಾರ ಭಾರಿ ಅವಘಡ ಸಂಭವಿಸಿತ್ತು. ಮೆಕ್ಕೆಜೋಳ ಸಂಗ್ರಹಿಸುವ ಕಬ್ಬಿಣದ ಬೃಹತ್ ತೊಟ್ಟಿ ಕುಸಿದು ಹನ್ನೊಂದು ಜನ ಸಿಲುಕಿದ್ದರು.
ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ನಾಲ್ವರನ್ನು ಸೋಮವಾರವೇ ರಕ್ಷಿಸಲಾಗಿದ್ದು, ಆರು ಜನ ಸಾವಿಗೀಡಾಗಿದ್ದರು. ಮಂಗಳವಾರ ಬೆಳಗ್ಗೆ ಮತ್ತೊಂದು ಶವ ಪತ್ತೆಯಾಗಿದ್ದು ಬಹುತೇಕ ಕಾರ್ಯಾಚರಣೆ ಪೂರ್ಣಗೊಂಡಂತಾಗಿದೆ.
ಬಿಹಾರ ಮೂಲದ ರಾಜೇಶ್ ಮುಖಿಯಾ (25), ರಾಮ್ರೀಜ್ ಮುಖಿಯಾ (29), ಸಂಬೂ ಮುಖಿಯಾ (26), ರಾಮ್ ಬಾಲಕ್ (38), ಲೋಖಿ ಜಾಧವ್ (56), ಕಿಶನಕುಮಾರ (20), ದಾಲನಚಂದ ಮುಖಿನ ಮೃತಪಟ್ಟವರು.
ನಿನ್ನೆ ಸಾಯಂಕಾಲದಿಂದ ಇಲ್ಲಿಯವರೆಗೂ ಸತತ 17 ಗಂಟೆಗಳ ಕಾಲ ರಕ್ಷಣಾ ಹಾಗೂ ಪತ್ತೆ ಕಾರ್ಯ ನಡೆಸಿದ ವಿವಿಧ ರಕ್ಷಣಾ ತಂಡಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)