ದ್ರಾಕ್ಷಿ ಹಾಳಾಗಿದ್ದಕ್ಕೆ ಆತ್ಮಹತ್ಯೆಗೆ ಶರಣು, ತಪ್ಪು ಔಷಧ ಸಿಂಪರಿಸಿದ್ದೇ ಬೆಳೆ ಹಾಳಾಗಲು ಕಾರಣ, ರೈತನ ಸಾವಿಗೆ ಮುಳುವಾಯಿತೇ ತಪ್ಪು ಮಾಹಿತಿ?
ಸರಕಾರ ನ್ಯೂಸ್ ವಿಜಯಪುರ
ದ್ರಾಕ್ಷಿ ಬೆಳೆ ಹಾಳಾಗಿದ್ದಕ್ಕೆ ಮನನೊಂದು ರೈತ ಆತ್ಮಹತ್ಯೆಕೊಂಡಿರುವ ಘಟನೆ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ನಡೆದಿದೆ.
ಮನೋಹರ ಆಯತವಾಡ (55) ಆತ್ಮಹತ್ಯೆಗೆ ಶರಣಾದ ರೈತ. ಭಾನುವಾರ ರಾತ್ರಿ ದ್ರಾಕ್ಷಿ ತೋಟದ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದ್ರಾಕ್ಷಿ ಬೆಳೆಗೆ ತಪ್ಪು ಔಷಧ ಸಿಂಪರಣೆ ಮಾಡಿದ ಕಾರಣಕ್ಕೆ ಇಡೀ ಬೆಳೆ ಹಾಳಾಗಿದೆ. ತಪ್ಪು ಔಷಧ ಸಿಂಪರಣೆಯಿಂದ ಫಸಲಿಗೆ ಬಂದಿದ್ದ ದ್ರಾಕ್ಷಿ ಒಣಗಿ ಹೋಗಿತ್ತು. ದ್ರಾಕ್ಷಿ ಬೆಳೆಗಾಗಿ 5 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದನು. ದ್ರಾಕ್ಷಿ ಫಸಲು ಒಣಗಿ ಹೋಗಿದ್ದರಿಂದ ಮಾಡಿದ ಖರ್ಚು ಬಾರದಂತಾಗಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಿಕೋಟಾ ಪೊಲೀಸ್ ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)