ಮೊಬೈಲ್ ಟವರ್ ಗಳ ಬ್ಯಾಟರಿ ಮಂಗಮಾಯ, ಕಳ್ಳರ ಹಾವಳಿಗೆ ಬೆಚ್ಚಿ ಬಿದ್ದ ಸೆಕ್ಯುರಿಟಿ ಸಿಬ್ಬಂದಿ, ಎಫ್‌ಐಆರ್ ದಾಖಲು
ಸರಕಾರ ನ್ಯೂಸ್ ಬಬಲೇಶ್ವರ
ಮೊಬೈಲ್ ಟವರ್‌ಗಳ ಬ್ಯಾಟರಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಳುವಾಗಿರುವ ಬ್ಯಾಟರಿಗಳಿಗಾಗಿ ಇದೀಗ ಶೋಧ ಆರಂಭಗೊಂಡಿದೆ.
ಬಬಲೇಶ್ವರ ತಾಲೂಕಿನ ದೇವರ ಗೆಣ್ಣೂರ ಗ್ರಾಮ ಹಾಗೂ ತಿಗಣಿ ಬಿದರಿ ಗ್ರಾಮದಲ್ಲಿ ಬ್ಯಾಟರಿ ಕಳವು ಮಾಡಲಾಗಿದೆ. ದೇವರ ಗೆಣ್ಣೂರ ಗ್ರಾಮದ ವೆಂಕಟಪ್ಪ ಅರಕೇರಿ ಇವರ ಜಮೀನಿನಲ್ಲಿ ಅಳವಡಿಸಿರುವ ಇಂಡಸ್ ಟಾವರ್ಸ್ ಕಂಪನಿಯ ಅಡಿಯಲ್ಲಿ ಇರುವ ಏರಟೆಲ್ ಟವರ್‌ನ ಬಾಕ್ಸ್‌ನಲ್ಲಿ ಅಳವಡಿಸಿದ್ದ ಎಕ್ಸೈಡ್ ಕಂಪನಿಯ 20 ಬ್ಯಾಟರಿಗಳನ್ನು ಕಳ್ಳತನ ಮಾಡಲಾಗಿದೆ. ಇದರ ಮೌಲ್ಯ 20 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇನ್ನು ತಿಗಣಿ ಬಿದರಿ ಗ್ರಾಮದ ಮಲ್ಲಿಕಾರ್ಜುನ ಶಿವಪ್ಪ ಮಾಳಿ ಇವರ ಜಮೀನಿನಲ್ಲಿ ಅಳವಡಿಸಿದ್ದ ಮೊಬೈಲ್ ಟಾವರ್‌ನ ರಾಜಾ ಕಂಪನಿಯ 24 ಬ್ಯಾಟರಿ ಕಳವು ಮಾಡಲಾಗಿದೆ. ಇವುಗಳ ಮೌಲ್ಯ 24 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕಂಪನಿಯ ಸೆಕ್ಯೂರಿಟಿ ಆಫೀಸ್ ರ ಬಬಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರಿದಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)