ವಿಜಯಪುರ ಸ್ಯಾಟ್‌ಲೈಟ್ ಬಸ್ ನಿಲ್ದಾಣದಲ್ಲಿ ಕಳ್ಳರ ಕೈಚಳಕ, ವ್ಯಾನಿಟಿ ಬ್ಯಾಗ್‌ನಿಂದ ಕಳುವಾದ ಚಿನ್ನಾಭರಣ ಎಷ್ಟು ಗೊತ್ತೆ? ನಿಜಕ್ಕೂ ನಿಬ್ಬೆರಗಾಗಿಸುವ ಪ್ರಕರಣ ಏನಿದು ನೀವೇ ನೋಡಿ…..
ಸರಕಾರ ನ್ಯೂಸ್ ವಿಜಯಪುರ
ತವರು ಮನೆಗೆ ಹೋಗುವ ಹುಮ್ಮಸ್ಸಿನಲ್ಲಿದ್ದ ಗೃಹಿಣಿಗೆ ಕಳ್ಳರು ಭರ್ಜರಿ ಶಾಕ್ ನೀಡಿದ್ದಾರೆ !
ವಿಜಯಪುರ ಸ್ಯಾಟ್‌ಲೈಟ್ ಬಸ್‌ನಿಲ್ದಾಣದಿಂದ ಬೆಳಗಾವಿಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಗ್ರಾಮದಲ್ಲಿರುವ ತವರು ಮನೆಗೆ ಹೊರಟಿದ್ದ ಪೂಜಾ ಸಾಯಿನಾಥ ಅಂದಾನಿಮಠ (38) ಎಂಬುವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳುವಾಗಿದ್ದು, ಅದರ ಮೌಲ್ಯ ಕೇಳಿದರೆ ಖಂಡಿತ ಅಚ್ಚರಿಯನ್ನುಂಟು ಮಾಡುತ್ತದೆ.
ಏನಿದು ಪ್ರಕರಣ?
ನ. 4ರಂದು ಪೂಜಾ ಅವರು ಮಗಳೊಂದಿಗೆ ಸ್ಯಾಟ್‌ಲೈಟ್ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ಬಸ್ ಹತ್ತುವಾಗ ನೂಕು ನುಗ್ಗಲಿನ ಮಧ್ಯೆ ಯಾರೋ ವ್ಯಾನಿಟಿ ಬ್ಯಾಗ್ ಜಗ್ಗಿದ್ದಾರೆ. ಅದನ್ನು ಗಮನಿಸದೆ ಬಸ್ ಹತ್ತಿರುವ ಪೂಜಾ ಬಸ್‌ನಲ್ಲಿ ಕುಳಿತ ಬಳಿಕ ಬ್ಯಾಗ್ ಗಮನಿಸಿದ್ದಾರೆ. ಬ್ಯಾಗ್‌ನ ಚೈನ್ ತೆರೆದಿದ್ದು ಅದರಲ್ಲಿದ್ದ ಚಿನ್ನಾಭರಣ ಇರಿಸಿದ್ದ ಪ್ಲಾಸ್ಟಿಕ್ ಡಬ್ಬಿ ಮಾಯವಾಗಿದೆ. ಬಳಿಕ ಬಸ್‌ನಿಂದ ಇಳಿದು ಹುಡುಕಾಡಿದ್ದು, ಶ್ರಮ ವ್ಯರ್ಥವಾಗಿದೆ.
ಎಷ್ಟಿತ್ತು ಬಂಗಾರ?
ಅಂದಾಜು 1.20 ಲಕ್ಷ ರೂ.ಮೌಲ್ಯದ 40 ಗ್ರಾಮ್ ತೂಕದ ಬಂಗಾರದ ಪಾಟ್ಲಿ, ಅಂದಾಜು 1.20 ಲಕ್ಷ ರೂ.ಮೌಲ್ಯದ 40 ಗ್ರಾಂ ತೂಕದ ಎರಡು ಜೊತೆ ಬಿಲ್ವಾರ್, ಅಂದಾಜು 1.10 ಲಕ್ಷ ರೂ.ಮೌಲ್ಯದ 38 ಗ್ರಾಂ ಚಿನ್ನದ ತಾಳಿ ಸರ ಹಾಗೂ ಅಂದಾಜು 15 ಸಾವಿರ ರೂ.ಮೌಲ್ಯದ 4 ಗ್ರಾಂ ಬಂಗಾರದ ಕಿವಿಯೋಲೆ ಸೇರಿ ಒಟ್ಟು 3.65 ಲಕ್ಷ ರೂ.ಮೌಲ್ಯದ 122 ಗ್ರಾಂ ಚಿನ್ನಾಭರಣ ಕಳುವಾಗಿದೆ.
ಈ ಬಗ್ಗೆ ಪೂಜಾ ಗಾಂಧಿ ಚೌಕ್ ಠಾಣೆಯಲ್ಲಿ ದೂರು ದಾಖಲಿಸಿದ್ದು ತನಿಖೆ ಮುಂದುವರಿದಿದೆ. ಯಾವುದಕ್ಕೂ ಸಾರ್ವಜನಿಕರು ಕಳ್ಳರಿಂದ ಎಚ್ಚರವಿರಿ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)