ಮೂವರು ಬೈಕ್ ಕಳ್ಳರ ಬಂಧನ, ವಶಪಡಿಸಿಕೊಂಡ ಬೈಕ್ ಮೌಲ್ಯ ಎಷ್ಟು ಗೊತ್ತಾ?
ಸರಕಾರ್ ನ್ಯೂಸ್ ವಿಜಯಪುರ
ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಸ್ಥಳೀಯ ಖತಿಜಾಪುರ ನಿವಾಸಿ ರವಿ ಸಂಗಮೇಶ ಬಾಡಗಂಡಿ, ಮುಜಾವರ ಗಲ್ಲಿ ನಿವಾಸಿ ಸತೀಶ ಊರ್ಫ್ ಲಕ್ಷ್ಮಿಕಾಂತ ಚಂದ್ರಶೇಖರ ಜಾಧವ ಹಾಗೂ ಓರ್ವ ಅಪ್ರಾಪ್ತ ಬಲಕನನ್ನು ಬಂಧಿಸಲಾಗಿದೆ.
ಜೂ.5 ರಂದು ತೊರವಿ ಗ್ರಾಮದ ಹತ್ತಿರ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದಾಗ ಪೊಲೀಸರು ಬಂಧಿಸಿ ತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ. ಇವರಿಂದ 1.80 ಲಕ್ಷ ರೂ.ಮೌಲ್ಯದ ಒಟ್ಟು ಆರು ಬೈಕ್ ವಶ ಪಡಿಸಿಕೊಳ್ಳಲಾಗಿದೆ.
ಗೋಳಗುಮ್ಮಟ ಪೊಲೀಸರ ಕಾರ್ಯಾಚರಣೆಗೆ ಎಸ್ ಪಿ ಎಚ್.ಡಿ. ಆನಂದ ಕುಮಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.