ಖೋಟಾ ನೋಟು ಚಲಾವಣೆ, ಇಬ್ಬರಿಗೆ ಶಿಕ್ಷೆ-ದಂಡ
ಸರಕಾರ ನ್ಯೂಸ್ ವಿಜಯಪುರ
ಖೋಟಾನೋಟು ತಯಾರಿಸಿ ಚಲಾವಣೆ ಮಾಡುತ್ತಿದ್ದ ಅಪರಾಧಿಗಳಿಗೆ 3 ವರ್ಷ ಜೈಲು ಶಿಕ್ಷೆ ಮತ್ತು 1.50 ಲಕ್ಷ ರೂಪಾಯಿ ದಂಡ ವಿಧಿಸಿ ಇಲ್ಲಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಸೋಹೆಲ್ ಮುರ್ತುಜಾಸಾಬ ಇನಾಮದಾರ ಹಾಗೂ ಸುಮನ್ ಬಸವರಾಜ ಬಂಗಾರಿ ಶಿಕ್ಷೆಗೆ ಗುರಿಯಾಗಿದ್ದಾರೆ. ಇವರು 2019ರಲ್ಲಿ ಕಲರ್ ಝರಾಕ್ಸ್ ಯಂತ್ರ, ಪೇಪರ್ ಹಾಗೂ ಪೇಪರ್ ಕಟರ್, ಇಂಚು ಪಟ್ಟಿಗಳ ಸಹಾಯದಿಂದ ಬ.ಬಾಗೇವಾಡಿಯ ಇಂದಿರಾ ನಗರದಲ್ಲಿರುವ ಬಾಡಿಗೆ ಮನೆಯಲ್ಲಿ 100 ರೂ. ಸರ್ಕಾರಿ ಮಾನ್ಯತೆ ಪಡೆದ ನೋಟುಗಳನ್ನು ಕಲರ್ ಝರಾಕ್ಸ್ ಮಾಡಿ ಚಲಾವಣೆಗೆ ಯತ್ನಿಸಿದ್ದರು. ಈ ಬಗ್ಗೆ ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಮಂಜುನಾಥ ಸಂಗ್ರೇಶಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಬಿ.ಡಿ. ಭಾಗವಾನ ವಾದ ಮಂಡಿಸಿದ್ದರು.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)