ವಿಜಯಪುರ

ಯೋಗಾಥಾನ ಪೂರ್ವಭಾವಿ ಸಿದ್ಧತೆ ಯಶಸ್ವಿ, ಹೇಗಿತ್ತು ಗೊತ್ತಾ ರಿಹರ್ಸಲ್?

ಸರಕಾರ್ ನ್ಯೂಸ್ ವಿಜಯಪುರ

ಜನವರಿ 15ರಂದು ನಡೆಯಲಿರುವ ಯೋಗಾಥಾನ ಕಾರ್ಯಕ್ರಮದ ಅಂಗವಾಗಿ
ನಗರದ ಸೈನಿಕ ಶಾಲೆಯ ಆವರಣದ 9 ಮೈದಾನಗಳಲ್ಲಿ ನಿರ್ಮಿಸಿದ ವಿವಿಧ ಬ್ಲಾಕ್ ಗಳಲ್ಲಿ ಶನಿವಾರ ಪೂರ್ವಭಾವಿ ಸಿದ್ಧತಾ ಯೋಗಾಥಾನ ಯಶಸ್ವಿಯಾಗಿ ನಡೆಯಿತು.

ಜಿಲ್ಲಾಧಿಕಾರಿಗಳಾದ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಜಿಲ್ಲಾ ಮಟ್ಟದ ಅಧಿಕಾರಿಗಳು, ಯೋಗ ತರಬೇತಿದಾರರು, ಯೋಗಪಟುಗಳು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪೂರ್ವಭಾವಿ ಸಿದ್ಧತಾಭ್ಯಾಸ ಯೋಗಾಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!