ಬೆಂಗಳೂರಿನ ಕೆಆರ್ ಪುರಂನಲ್ಲಿಅಬಕಾರಿ ದಾಳಿ, ಲಕ್ಷಾಂತರ ರೂ.ಮೌಲ್ಯದ ಮಾದಕ ವಸ್ತು ಜಫ್ತು
ಬೆಂಗಳೂರ: ಮಾದಕ ವಸ್ತು ಸಾಗಾಟ ಹಾಗೂ ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ಭರ್ಜರಿ ಕಾರ್ಯಾಚಾರಣೆ ನಡೆಸಿರುವ ಅಬಕಾರಿ ಅಧಿಕಾರಿಗಳು ಲಕ್ಷಾಂತರ ರೂ.ಮೌಲ್ಯದ ಮಾದಕ ದೃಶ್ಯ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಓಲ್ಟ್ ಮದ್ರಾಸ್ ರಸ್ತೆಯ ಕೆಆರ್ ಪುರಂ ಮಾರುಕಟ್ಟೆ ಹತ್ತಿರ ನಡೆದ ಅಬಕಾರಿ ದಾಳಿಯಲ್ಲಿ 4 ಲಕ್ಷ ರೂ.ಮೌಲ್ಯದ ಮಾದಕ ವಸ್ತು ದೊರಕಿದೆ. ಅಬಕಾರಿ ಜಂಟಿ ಆಯುಕ್ತರಾದ ಶ್ರೀ ಜೆ ಗಿರಿ ಸರ್ ಹಾಗೂ ಉಪ ಆಯುಕ್ತರಾದ ಶ್ರೀ ಬಸವರಾಜ ಸಂದಿಗವಾಡ ಅವರ ಮಾರ್ಗದರ್ಶನ ದಲ್ಲಿ ಮಹದೇವಪುರ ಅಬಕಾರಿ ಇನ್ ಸ್ಪೆಕ್ಟರ್ ಎ.ಎ. ಮುಜಾವರ ನೇತೃತ್ವದ ತಂಡ ದಾಳಿ ನಡೆಸಿದೆ.
ಕೇರಳ ರಾಜ್ಯದ ರೇನೆಟ್ ಜಾರ್ಜ್ ಅಬ್ರಹಾಂ ಎಂಬ ವ್ಯಕ್ತಿ ಯು ಮಾರಾಟಕ್ಕಾಗಿ ತಂದಿದ್ದ 46.50 ಗ್ರಾಮ್ ಮೆಥಾಂಫೆಟಮೈನ್ (ಕ್ರಿಸ್ಟಲ್ ಮೆಥ್) ಮತ್ತು 860 ಗ್ರಾಂ ಒಣಗಿದ ಗಾಂಜಾ ಜಪ್ತಿಪಡಿಸಿಕೊಂಡು NDPS ಕಾಯ್ದೆ 1985 ರಡಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ರೇನೇಟ್ ಅಬ್ರಹಾಂ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.