ಲೋಕಸಭೆ ಚುನಾವಣೆ ಕರ್ತವ್ಯ ಚ್ಯುತಿ; ಸಹ ಶಿಕ್ಷಕ ಅಮಾನತ್ತು, ಯಾರು ಗೊತ್ತಾ?
ಸರಕಾರ ನ್ಯೂಸ್ ವಿಜಯಪುರ
ಲೋಕಸಭೆ ಚುನಾವಣೆ ಕರ್ತವ್ಯಕ್ಕೆ ಚ್ಯುತಿ ಎಸಗಿರುವ ಸಹ ಶಿಕ್ಷಕನನ್ನ ಅಮಾನತ್ತುಗೊಳಿಸಿ ಜಿಲ್ಲಾ ಚುನಾವಣೆ ಅಧಿಕಾರಿ ಟಿ.ಭೂಬಾಲನ್ ಆದೇಶಿಸಿದ್ದಾರೆ.
ತಿಕೋಟಾ ತಾಲೂಕಿನ ಅರಕೇರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಮುಜಮ್ಮಿಲ್ ಮುಲ್ಲಾ ಇವರನ್ನು ಅಮಾನತ್ತುಗೊಳಿಸಲಾಗಿದೆ.
ಮುಜಮ್ಮಿಲ್ ಮುಲ್ಲಾ ಅವರನ್ನುಬಬಲೇಶ್ವರ ವಿಧಾನ ಸಭೆ ಕ್ಷೇತ್ರದ ಮತಗಟ್ಟೆ ಸಂಖ್ಯೆ-25ಕ್ಕೆ ಮತಗಟ್ಟೆ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು. 2024 ಮಾ. 14ರಂದೇ ಆದೇಶ ನೀಡಲಾಗಿತ್ತು. ಆದರೆ, ಕರ್ತವ್ಯ ನಿರ್ವಹಿಸಲು ನಿರಾಕರಿಸಿದ್ದರಿಂದ ಕ್ರಮ ಕೈಗೊಳ್ಳಲು ತಿಕೋಟಾ ತಹಸೀಲ್ದಾರ್ ವರದಿ ಸಲ್ಲಿಸಿದ್ದರು.
ಸ್ಪಿರಿಟ್ ತುಂಬಿದ ಲಾರಿ ಪಲ್ಟಿ, ಆಗಸದೆತ್ತರಕ್ಕೆ ಚಿಮ್ಮಿದ ಬೆಂಕಿ ಜ್ವಾಲೆ, ಹೇಗಾಯಿತು? ಏನಾಯಿತು?
ವರದಿ ಆಧರಿಸಿ ನೋಟಿಸ್ ನೀಡಿದರೂ ಯಾವುದೇ ವಿವರಣೆ ನೀಡಿಲ್ಲ ಹಾಗೂ ಕರ್ತವ್ಯ ಕೂಡ ನಿರ್ವಹಿಸಿಲ್ಲ. ಸಾಕಷ್ಟು ಬಾರಿ ಮೌಖಿಕವಾಗಿ ಹಾಗೂ ನೋಟಿಸ್ ಮೂಲಕ ತಿಳಿಸಿದಾಗ್ಯೂ ಅವರು ಸ್ಪಂದಿಸಿಲ್ಲ. ಇದರಿಂದಾಗಿ ಚುನಾವಣೆ ಕರ್ತವ್ಯಕ್ಕೆ ಹಿನ್ನಡೆಯಾಗಿದ್ದರಿಂದ ಅವರನ್ನು ಅಮಾನತ್ತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ಧಾರೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)