ವಿಜಯಪುರ

ಲೋಕಾಯುಕ್ತ ದಾಳಿ; ಆರ್ ಟಿಒ ಅಧಿಕಾರಿಗೆ ಬೆಳ್ಳೆಂಬೆಳಗ್ಗೆ ಶಾಕ್!!!!!

ಸರಕಾರ‌ ನ್ಯೂಸ್ ವಿಜಯಪುರ

ಸರ್ಕಾರದ ರಾಜಸ್ವ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವ ಆರ್ ಟಿಒ ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

ಇಲ್ಲಿನ ಚಾಲುಕ್ಯ ನಗರದಲ್ಲಿ ವಾಸವಾಗಿರುವ ಬಾಗಲಕೋಟೆ ಜಿಲ್ಲೆ ಜಮಖಂಡಿಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಷಣ್ಮುಖಪ್ಪ ತೀರ್ಥ ನಿವಾಸದ ಮೇಲೆ ದಾಳಿ ನಡೆದಿದೆ.

ಲೋಕಸಭೆ ಚುನಾವಣೆ ಕರ್ತವ್ಯ ಚ್ಯುತಿ; ಸಹ ಶಿಕ್ಷಕ ಅಮಾನತ್ತು, ಯಾರು ಗೊತ್ತಾ?

ಲೋಕಾಯುಕ್ತ ಎಸ್ ಪಿ ಮಲ್ಲೇಶ ನೇತೃತ್ವದಲ್ಲಿ ದಾಳಿ ನಡೆದಿದ್ದು, ಸುದೀರ್ಘ ಅವಧಿ ದಾಖಲೆ ಪರಿಶೀಲಿಸಲಾಯಿತು.

ವಿಜಯಪುರ ನಗರದ ವಿವಿಧೆಡೆ ಇರುವ ಸಂಬಂಧಿಕರ ಮನೆ ಮೇಲೂ ದಾಳಿ ನಡೆದಿದೆ. ಡಿವೈಎಸ್ ಪಿ ಸುರೇಶ ರೆಡ್ಡಿ, ಇನ್ಸ್ಪೆಕ್ಟರ್ ಆನಂದ ಠಕ್ಕಣ್ಣವರ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!