ಭೀಮಾತೀರದಲ್ಲಿ ಹಾಡಹಗಲೇ ಲೂಟಿ, ಕಾರ್ ಬೋನಟ್ ಮೇಲೆ ಆಯಿಲ್ ಚೆಲ್ಲಿ ಕಿರಾತಕರು ಮಾಡಿದ್ದೇನು?
ಸರಕಾರ್ ನ್ಯೂಸ್ ವಿಜಯಪುರ
ಭೀಮಾತೀರ ಖ್ಯಾತಿಯ ಚಡಚಣದಲ್ಲಿ ಹಾಡಹಗಲೇ ಹಣ ಲೂಟಿ ನಡೆದಿದೆ.
ಸರ್ ಕಾರ್ ಬೋನಟ್ ಮೇಲೆ ಆಯಿಲ್ ಚೆಲ್ಲಿದೆ ನೋಡಿ ಎನ್ನುತ್ತಲೇ ಬರೋಬ್ಬರಿ 18 ಲಕ್ಷ ರೂಪಾಯಿ ಎಗರಿಸಲಾಗಿದೆ.
ಬುಧವಾರ ಹಾಡಹಗಲೇ ಇಂಥದ್ದೊಂದು ಘಟನೆ ನಡೆದಿದ್ದು,
ಲೋಣಿ ಬಿಕೆ ಗ್ರಾಮದ ಸಿದ್ದಾರಾಮ ಕಾಪ್ಸೆ ಎಂಬುವರು ಹಣ ಕಳೆದುಕೊಂಡಿದ್ದಾರೆ.
ಚಡಚಣ ಪಟ್ಟಣದ ಕರ್ನಾಟಕ ಬ್ಯಾಂಕ್ ನಿಂದ ಹಣ ಬಿಡಿಸಿಕೊಂಡು ಹೋಗುವಾಗ ಕಾರ್ ಬೋನಟ್ ಮೇಲೆ ಆಯಿಲ್ ಚೆಲ್ಲಿದ ಕಿರಾತಕರು ಇಂಜಿನ್ ಆಯಿಲ್ ಸೋರಿಕೆಯಾಗುತ್ತಿದೆ ಎಂದು ಯಾಮಾರಿಸಿದ್ದಾರೆ.
ಸಿದ್ದರಾಮ ಕಾಪ್ಸೆ ಕಾರ್ ಬೋನಟ್ ಎತ್ತಿ ಪರಿಶೀಲಿಸುತ್ತಿದ್ದಾಗ ಹಿಂಬದಿ ಸೀಟ್ ನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ.
ಚಡಚಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಸುತ್ತಲಿನ ಸಿಸಿ ಟಿವಿ ಪರಿಶೀಲನೆ ನಡೆಸಿದ್ದಾರೆ.