ವಿಜಯಪುರ

ವ್ಯಾಪಾರಿ ಬಳಿಕ ಮಹಿಳೆ ಹಣವೂ ಲೂಟಿ, ಗಡಿಭಾಗದಲ್ಲಿ ಕಳ್ಳರ ಕೈಚಳಕ, ಭೀಮಾತೀರದಲ್ಲಿ ಬೀಡು ಬಿಟ್ಟಿತೇ ಖದೀಮರ ಗ್ಯಾಂಗ್?

ಸರಕಾರ್ ನ್ಯೂಸ್ ವಿಜಯಪುರ

ಭೀಮಾತೀರದ ಚಡಚಣ ಪಟ್ಟಣದಲ್ಲಿ ವ್ಯಾಪಾರಿಯೊಬ್ಬನ 18 ಲಕ್ಷ ರೂಪಾಯಿ ಎಗರಿಸಿದ ಬೆನ್ನಲ್ಲೇ ಅಮಾಯಕ ಹೆಣ್ಣುಮಗಳೊಬ್ಬಳು ಇಂಥದ್ದೇ ಕೃತ್ಯಕ್ಕೆ ತುತ್ತಾಗಿದ್ದಾಳೆ.

ಹೌದು, ಕರ್ನಾಟಕ ಬ್ಯಾಂಕ್‌ನಿಂದ 18 ಲಕ್ಷ ರೂಪಾಯಿ ಬಿಡಿಸಿಕೊಂಡು ಹೊರಟಿದ್ದ ಲೋಣಿ ಬಿಕೆ ಗ್ರಾಮದ ಸಿದ್ದರಾಮ ಕಾಪ್ಸೆ ಎಂಬುವರ 18 ಲಕ್ಷ ರೂಪಾಯಿ ಎಗರಿಸಲಾಗಿತ್ತು. ಕಾರ್ ಬೋನಟ್ ಮೇಲೆ ಆಯಿಲ್ ಚೆಲ್ಲಿ ಗಮನ ಬೇರೆ ಕಡೆ ಸೆಳೆದು ಕಾರ್ ಹಿಂದಿನ ಸೀಟ್‌ನಲ್ಲಿದ್ದ 18 ಲಕ್ಷ ರೂಪಾಯಿ ಎಗರಿಸಲಾಗಿತ್ತು. ಅದರ ಬೆನ್ನಲ್ಲೇ ಪಟ್ಟಣಕ್ಕೆ ಸಂತೆಗೆ ಬಂದಿದ್ದ ಮಹಾರಾಷ್ಟ್ರ ಹೆಣ್ಣು ಮಗಳೊಬ್ಬರ 40 ಸಾವಿರ ರೂಪಾಯಿ ಎಗರಿಸಲಾಗಿದೆ.

ಮಹಾರಾಷ್ಟ್ರದ ಸಿದ್ಧಾಪುರ ಗ್ರಾಮದ ಸರೋಜಿನಿ ಓಗಸಿದ್ದ ನಾಂರೆ ಎಂಬುವರ ಹಣ ಲೂಟಿಯಾಗಿದೆ. ಆರಂಭದಲ್ಲಿ ಕಿವಿಯೋಲೆ ತರಲೆಂದು ಬಂಗಾರ ಅಂಗಡಿಗೆ ಹೋಗಿದ್ದ ಸರೋಜಿನಿ ಅಲ್ಲಿ 2400 ರೂಪಾಯಿ ಮುಂಗಡ ಕೊಟ್ಟು, ಬಳಿಕ ಬಟ್ಟೆ ಖರೀದಿಗೆ ಹೋಗಿದ್ದಾಳೆ. ಅಲ್ಲಿ 1000 ರೂಪಾಯಿ ಕೊಟ್ಟು ಉಳಿದ ಹಣ ಕೈಚೀಲದಲ್ಲಿ ಇರಿಸಿದ್ದಾಳೆ. ಇದನ್ನೆಲ್ಲ ಗಮನಿಸಿದ್ದ ಕಿರಾತಕರು ಬಟ್ಟೆ ಅಂಗಡಿ ಹೊರಗಡೆ ಬರುತ್ತಿದ್ದಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪರಸ್ಪರ ಜಗಳಾಡಿದಂತೆ ಮಾಡಿ ಸರೋಜಿನಿ ಮೈಮೇಲೆ ಬಿದ್ದಿದ್ದಾರೆ. ಈ ವೇಳೆ ಹಣ ಕಳುವಾಗಿದೆ. ಆದರೆ, ಸರೋಜಿನಿ ಗಮನಕ್ಕಿದು ತಡವಾಗಿ ಬಂದಿದ್ದು, ಕಂಗಾಲಾಗಿ ರಸ್ತೆ ಬದಿ ಅಳುತ್ತಾ ನಿಂತಿದ್ದಾಳೆ.ಬಳಿಕ ಪೊಲೀಸರ ಗಮನಕ್ಕೆ ತಂದಿದ್ದಾಗಿ ತಿಳಿಸಿದ್ದಾಳೆ.

error: Content is protected !!