ವಿಜಯಪುರ

ಸುಧಾಮೂರ್ತಿ ವಿಜಯಪುರವನ್ನೇ ನೋಡಲ್ ಜಿಲ್ಲೆಯಾಗಿ ಆಯ್ದುಕೊಂಡಿದ್ದು ಏಕೆ? ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಗೊಂಡ ಮಹತ್ವದ ನಿರ್ಣಯ ಏನು ಗೊತ್ತಾ?

ಸರಕಾರ ನ್ಯೂಸ್ ವಿಜಯಪುರ

ರಾಜ್ಯ ಸಭೆ ಸದಸ್ಯೆ ಸುಧಾಮೂರ್ತಿಗೂ ಐತಿಹಾಸಿಕ ವಿಜಯಪುರ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ !

ಹೌದು, ತಮ್ಮ ಬಾಲ್ಯವನ್ನು ವಿಜಯಪುರದಲ್ಲಿಯೇ ಕಳೆದ ಸುಧಾಮೂರ್ತಿ ಇಲ್ಲಿ ಅನೇಕ ಸಂಬಂಧಗಳನ್ನು ಹೊಂದಿದ್ದಾರೆ. ಕೃಷ್ಣಾ ತೀರದ ಜನರ ಒಡನಾಟ ಮತ್ತು ಇಲ್ಲಿ ಸಂಬಂಧಿಕರನ್ನು ಹೊಂದಿದ್ದಾರೆ. ಅಂತೆಯೇ ಐತಿಹಾಸಿಕ ವಿಜಯಪುರ ಜಿಲ್ಲೆಯನ್ನು ನೋಡಲ್ ಜಿಲ್ಲೆಯನ್ನಾಗಿ ಆಯ್ದುಕೊಂಡಿದ್ದು, ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗಾಗಿ ಯೋಜನೆ ಮತ್ತು ಯೋಚನೆ ಹೊಂದಿದ್ದಾರೆ

ಏನಿದು ಯೋಜನೆ?

ದೆಹಲಿ, ಮುಂಬೈ ಮತ್ತಿತರ ಭಾಗಗಳಿಂದ ವಿಜಯಪುರಕ್ಕೆ ಅನೇಕ ಪ್ರವಾಸಿಗರು ಬರುತ್ತಾರೆ. ಹೀಗಾಗಿ ಪ್ರವಾಸೋದ್ಯಮ ಕ್ಷೇತ್ರ ಬಲಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿರುವ ಸುಧಾಮೂರ್ತಿ ಅವರು ಈ ಭಾಗದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ತಿಳಿಸಿದರು.

ಕಾಯಕಲ್ಪ ಪ್ರಶಸ್ತಿ ಕಂಡ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಧರ್ಮ ಶಾಲೆ ಸ್ಥಾಪಿಸುವ ಅವಶ್ಯಕತೆ ಇದೆ. ಆ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ. ಸಿಂದಗಿ, ಬಸವನಬಾಗೇವಾಡಿ ಹಾಗೂ ತಾಳಿಕೋಟೆಯಲ್ಲಿ ಸುಸಜ್ಜಿತ ಗ್ರಂಥಾಲಯ ಸ್ಥಾಪಿಸಲು ತೀರ್ಮಾನಿಸಲಾಗಿದೆ. ವಿಜಯಪುರ ಜಿಲ್ಲೆ ಜನ ಕೌಶಲ ಹೊಂದಿದವರು. ಇಲ್ಲೊಂದು ಜಿಮ್ ಅವಶ್ಯಕತೆ ಇದೆ.

ಇಂಥ ಹಲವು ಯೋಜನೆ- ಯೋಚನೆ ಹಮ್ಮಿಕೊಳ್ಳಲಾಗಿದೆ. ಬರುವ ದಿನಗಳಲ್ಲಿ ಪಟ್ಟಿ ಮಾಡಿ ಆದ್ಯತಾನುಸಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕುಮಟಗಿಯ ಬೇಸಿಗೆ ಅರಮನೆಯ ಅಭಿವೃದ್ಧಿಗಾಗಿ 2 ಕೋಟಿ ರೂ.ಅನುದಾನ ನೀಡುವುದಾಗಿ ತಿಳಿಸಿದರು.

error: Content is protected !!