ವಿಜಯಪುರ

ಮಕ್ಕಳ ಖ್ಯಾತ ಸಾಹಿತಿ ಶರಣಪ್ಪ ಕಂಚ್ಯಾಣಿ ಇನ್ನಿಲ್ಲ…

ವಿಜಯಪುರ: ಮಕ್ಕಳ ಖ್ಯಾತ ಸಾಹಿತಿ ಶರಣಪ್ಪಕಂಚ್ಯಾಣಿ (92) ವಿಧಿವಶರಾಗಿದ್ದಾರೆ.
ಕಳೆದ ಐವತ್ತು ವರ್ಷಗಳಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಶರಣಪ್ಪ ಕಂಚ್ಯಾಣಿ ಕಳೆದ ಕೆಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಬುಧವಾರ ಬೆಳಗ್ಗೆ ಇಹಲೋಕ ತ್ಯಜಿಸಿದರು.
ಮಕ್ಕಳ ಸಾಹಿತ್ಯ, ಕವನ, ಮಕ್ಕಳ ಕಥೆ, ಶಿಶು ಪ್ರಾಸ, ಖಂಡ ಕಾವ್ಯ, ಚರಿತ್ರೆ ಸೇರಿದಂತೆ ಇತರೆ ವಿಷಯಗಳ ಸಾಹಿತ್ಯ ಕೃಷಿ ಮಾಡಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಮೃತ ಶರಣಪ್ಪ ಕಾಂಚ್ಯಾಣಿ ಅವರ ಆಶಯದಂತೆ ಅವರ ದೇಹವನ್ನು ಬಿಎಲ್‌ಡಿಇ ಸಂಸ್ಥೆಗೆ ದಾನ ಮಾಡಲಾಗುತ್ತಿದೆ. ಕುಟುಂಬ ವಲಯದಲ್ಲಿ ದುಃಖ ಮಡುಗಟ್ಟಿದ್ದು, ಇವರ ಅಗಲಿಕೆಯಿಂದ ಜಿಲ್ಲೆಯ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಸಾಹಿತಿಗಳು, ರಾಜಕೀಯ ನಾಯಕರು ಹಾಗೂ ಅವರ ಅಭಿಮಾನಿಗಳು ಅಂತಿಮ ದರ್ಶನಕ್ಕೆ ತೆರಳುತ್ತಿದ್ದಾರೆ.

error: Content is protected !!