ರಾಜ್ಯ

ಕೆಂಡದ ಮೇಲೆ ಕಂಬಳಿ ಹಾಸಿ ಕೂತ ಭಕ್ತ, ಮೋಹರಂನಲ್ಲಿ ಪವಾಡ ಸೃಷ್ಠಿ ಎಂದ ಭಕ್ತರು….ಏನಿದು ವಿಸ್ಮಯ?

ವಿಜಯಪುರ: ಮೋಹರಂ ಎಂದರೆ ಭಾವೈಕ್ಯತೆಯ ಪ್ರತೀಕ. ಹಿಂದು- ಮುಸಲ್ಮಾನರೆಲ್ಲರೂ ಆಚರಿಸಿಕೊಂಡು ಬಂದಿರುವ ಪವಿತ್ರ ಆಚರಣೆಗಳಲ್ಲೊಂದು. ಇಂಥ ಪವಿತ್ರ ಆಚರಣೆಯಲ್ಲಿ ಕೆಂಡ ಹಾಯುವುದು, ಹರಕೆ ತೀರಿಸುವುದು, ಹರಕೆ ಹೊತ್ತುಕೊಳ್ಳಿವುದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಅಂತೆಯೇ ಮೊಹರಂ ಆಚರಣೆ ಸಂದರ್ಭ ಭಕ್ತನೋರ್ವ ಕೆಂಡದ ಮೇಲೆ ಕಂಬಳಿ ಹಾಸಿ ಕುಳಿತುಕೊಳ್ಳುವ ಮೂಲಕ ಗಮನ ಸೆಳೆದಿದ್ದು, ಭಕ್ತರು ಇದನ್ನು ಪವಾಡ ಎನ್ನುತ್ತಿದ್ದಾರೆ. ಮುದ್ದೇಬಿಹಾಳ ತಾಲ್ಲೂಕಿನ ಮದರಿ ಗ್ರಾಮದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಗ್ರಾಮದ ಏಳು ಅಲಾಯಿ ಎದುರಿನಲ್ಲಿ ಯಲ್ಲಪ್ಪ ಹುಗ್ಗಿ ಎಂಬಾತ ಕೆಂಡ ಹಾಯುವಾಗ ನಿಗಿ ನಿಗಿ ಉರಿಯುತ್ತಿದ್ದ ಕೆಂಡದ ಮೇಲೆ ಕಂಬಳಿ ಹಾಸಿ ಕುಳಿತಿದ್ದಾನೆ. ಬಳಿಕೆ ಎದ್ದು ಕಂಬಳಿ ಜಾಡಿಸಿ ಮುನ್ನಡೆದಿದ್ದಾನೆ‌. ಯಲ್ಲಪ್ಪ ಹುಗ್ಗಿಯಿಂದ ಪವಾಡ ಸೃಷ್ಟಿ ಎಂದು ಜನ ಆಡಿಕೊಳ್ಳುತ್ತಿದ್ದಾರೆ. ಅಲ್ಲದೇ ಅನೇಕ ಭಕ್ತರು ಕೆಂಡ ಹಾಯ್ದು ಗಮನ ಸೆಳೆದರು. ಇದೊಂದು ವಿಸ್ಮಯ ಎಂದು ಭಕ್ತರು ಕೊಂಡಾಡುತ್ತಿದ್ದಾರೆ.

error: Content is protected !!