ನಮ್ಮ ವಿಜಯಪುರ

ವಿಜಯಪುರದಲ್ಲಿ ಲೋಕಾಯುಕ್ತ ದಾಳಿ.. ಎಲ್ಲಿ ಗೊತ್ತಾ..?

ವಿಜಯಪುರ: ಭ್ರಷ್ಟ ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆದೆ. ವಿಜಯಪುರದಲ್ಲೂ ಭ್ರಷ್ಟ ಅಧಿಕಾರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಯಾದಗಿರಿ ಜಿಲ್ಲೆಯ ಯೋಜನಾಧಿಕಾರಿ ಬಲವಂತ ರಾಠೋಡ ನಿವಾಸದ‌ ಮೇಲೆ ದಾಳಿ ನಡೆದಿದೆ. ಯಾದಗಿರಿ-ವಿಜಯಪುರ ಸೇರಿ ನಿವಾಸ, ಕಚೇರಿ ಮೇಲೆ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ.‌ ವಿಜಯಪುರ ನಗರದ ಡಿಸಿಸಿ ಬ್ಯಾಂಕ್ ಹಿಂಬದಿಯ ಕೆ.ಸಿ ರಸ್ತೆಯಲ್ಲಿರುವ ಬಲವಂತ ನಿವಾಸದಲ್ಲಿ ದಾಖಲಾತಿ‌ ಪರಿಶೀಲನೆ ಮುಂದುವರಿದಿದೆ.

error: Content is protected !!