ನಿಮಗಿದು ಗೊತ್ತೆ? ವಿಜಯಪುರದಲ್ಲಿ ಕರೊನಾ ಸೋಂಕು ಪತ್ತೆ !
ಸರಕಾರ್ ನ್ಯೂಸ್ ವಿಜಯಪುರ
ಐತಿಹಾಸಿಕ ವಿಜಯಪುರ ನಗರದಲ್ಲಿ ಕರೊನಾ ನಾಲ್ಕನೇ ಅಲೆಯ ಮೊದಲ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ !
ದೇಶಾದ್ಯಂತ ತೀವ್ರ ಸದ್ದು ಮಾಡುತ್ತಿರುವ ಕರೊನಾ ನಾಲ್ಕೆ ಅಲೆ ಗುಮ್ಮಟ ನಗರಿಗೂ ವಿಸ್ತರಿಸಿದ್ದು ಈಗಾಗಲೇ ಓರ್ವ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ, ಅಷ್ಟೇ ಅಲ್ಲ, ಇದೀಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯೂ ಆಗಿದ್ದಾರೆ.
ಅಂದ ಹಾಗೆ ಸೋಂಕಿತ ವ್ಯಕ್ತಿ ವಿಜಯಪುರದ ನಗರದವರಾಗಿದ್ದು, 45ರ ವಯೋಮಾನದವರಾಗಿದ್ದಾರೆ. ಡಿ. 23ರಂದೇ ಈ ಪ್ರಕರಣ ಬೆಳಕಿಗೆ ಬಂದಿದ್ದು, ಸೋಂಕಿತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದ ಹಿನ್ನೆಲೆ ಆರ್ ಟಿಪಿಸಿಆರ್ ಹಾಗೂ ರ್ಯಾಟ್ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಸೋಂಕು ದೃಢಪಟ್ಟಿತ್ತು. ಬಳಿಕ ಚಿಕಿತ್ಸೆ ನೀಡಲಾಗಿದ್ದು, ಗುಣಮುಖರಾದ ಹಿನ್ನೆಲೆ ಡಿ. 26ರಂದೇ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಎನ್. ಲಕ್ಕಣ್ಣವರ ತಿಳಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)