ನಮ್ಮ ವಿಜಯಪುರ

ಮೂರು ಶ್ವಾನ ಹತ್ಯೆಗೈದು ಎರಡು ಮನೆಯಲ್ಲಿ ಕಳ್ಳತನ

ವಿಜಯಪುರ: ಮನೆಯ ಎದುರಿನ ಮೂರು ಶ್ವಾನಗಳ ಹತ್ಯೆಗೈದು ಎರಡು ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿರುವ ಘಟನೆ ವಿಜಯಪುರ ನಗರದ ಕಸ್ತೂರಿ ಕಾಲೋನಿಯಲ್ಲಿ ನಡೆದಿದೆ. ಎರಡು ಮನೆಯ ಬೀಗ ಒಡೆದು 4.35 ಲಕ್ಷ ಹಾಗೂ ಐದು ತೊಲಿ ಚಿನ್ನ ಕಳ್ಳತನ ಮಾಡಿದ್ದಾರೆ. ಅಲ್ಲದೇ, ಶೇಖ್ ಎಂಬುವರು ಮುಂಬೈಗೆ ಹೋದಾಗ 35 ಸಾವಿರ ನಗದು, ವಿವಿಧ ವಸ್ತುಗಳ ಹಾಗೂ ಶಕೀಲ್ ಎಂಬುವರ ಮನೆಯಲ್ಲಿ ನಾಲ್ಕು ಲಕ್ಷ ನಗದು, ಐದು ತೊಲಿ ಚಿನ್ನ ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

error: Content is protected !!