ಎಸಿಬಿ ಬಲೆಗೆ ಮತ್ತೊಬ್ಬ ಭ್ರಷ್ಟ ಸಿಬ್ಬಂದಿ, ಚುರುಕಿನ ಕಾರ್ಯಾಚರಣೆ, ಖೆಡ್ಡಾಗೆ ಬಿದ್ದ ಸಿಬ್ಬಂದಿ ಯಾರು ಗೊತ್ತಾ?
ಸರಕಾರ್ ನ್ಯೂಸ್ ವಿಜಯಪುರ
ಭ್ರಷ್ಟಾಚಾರದ ವಿರುದ್ದ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ತೀವ್ರಗೊಂಡಿದ್ದು ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಎಫ್ ಡಿಎ ವಿನೋದ ರಾಠೋಡ ಬೆನ್ನಲ್ಲೇ ಮತ್ತೋರ್ವ ಸಿಬ್ಬಂದಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಇಲ್ಲಿನ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಕೇಸ್ ವರ್ಕರ್ ಕಿರಣಕುಮಾರ ಡಂಗೆ ಎಸಿಬಿ ಬಲೆಗೆ ಬಿದ್ದ ಸಿಬ್ಬಂದಿ.
ಹೋಟೆಲ್ ಪರವಾನಿಗೆ ಯನ್ನು ನವೀಕರಿಸಲು 2000 ರೂ.ಗಳಿಗೆ ಬೇಡಿಕೆ ಇರಿಸಿದ್ದ ಕಿರಣಕುಮಾರ ಆ ಮೊತ್ತ ಸ್ವೀಕರಿಸುವಾಗಿ ಸಾಕ್ಷ ಸಮೇತ ಸಿಕ್ಕಿ ಬಿದ್ದಿದ್ದಾನೆ. ಬಂಧಿತ ಕಿರಣಕುಮಾರ ಹೊರಗುತ್ತಿಗೆ ನೌಕರನಾಗಿದ್ದಾನೆ.
ಎಸ್ ಪಿ ನೇಮಗೌಡ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಮಂಜುನಾಥ ಗಂಗಲ್ಲ ನೇತೃತ್ವದಲ್ಲಿ ಇನ್ ಸ್ಪೆಕ್ಟರ್ ಪರಮೇಶ್ವರ ಜಿ.ಕವಟಗಿ ಮತ್ತಿತರರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.