ಸಿದ್ಧೇಶ್ವರ ಶ್ರೀಗಳ ಚಿತಾಭಸ್ಮ ಎಲ್ಲಿ? ಯಾವ ನದಿಗೆ ಅರ್ಪಣೆ? ಇಲ್ಲಿದೆ ಮಾಹಿತಿ
ಸರಕಾರ್ ನ್ಯೂಸ್ ವಿಜಯಪುರ
ನಡೆದಾಡುವ ದೇವರು ಪರಮ ಪೂಜ್ಯ ಲಿಂ. ಸಿದ್ಧೇಶ್ವರ ಶ್ರೀಗಳ ಚಿತಾಭಸ್ಮವನ್ನು ಜ. 8 ರಂದು ನದಿಗೆ ಅರ್ಪಿಸುವುದಾಗಿ ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಶ್ರೀಗಳು ತಿಳಿಸಿದರು.
ಜ್ಞಾನಯೋಗಾಶ್ರಮದಲ್ಲಿ ಗುರುವಾರ ಬೆಳಗ್ಗೆ ಪೂಜ್ಯರ ಚಿತಾಭಸ್ಮ ಸಂಗ್ರಹಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ ರಾತ್ರಿ ಚಿತಾ ಭಸ್ಮದಿಂದ ಅಸ್ಥಿಯನ್ನು ಐದು ಮಡಿಕೆಯಲ್ಲಿ ಸಂಗ್ರಹಣೆ ಮಾಡಲಾಯಿತು. ದೊಡ್ಡ ಮಡಿಕೆಯಲ್ಲಿ ಚಿತಾಭಸ್ಮ ಸಂಗ್ರಹಿಸಲಾಯಿತು. ಇನ್ನು ಬ್ರಾಹ್ಮಿ ಮುಹೂರ್ತದಲ್ಲಿ ಚಿತಾ ಭಸ್ಮದ ಕಾರ್ಯ ನೆರವೇರಿತು. ಪೂಜ್ಯ ಗುರುದೇವರ ಚಿತಾಭಸ್ಮವನ್ನು ಅವರ ಇಚ್ಚೆಯಂತೆ ಸಂಗ್ರಹ ಮಾಡಿದ್ದು ಸಾಗರ ಮತ್ತು ನದಿಗಳಲ್ಲಿ ವಿಸರ್ಜನೆ ಮಾಡಲಾಗುವುದು ಎಂದರು.
ತ್ರಿವೇಣಿ ಸಂಗಮ ಸುಕ್ಷೇತ್ರ ಕೂಡಲಸಂಗಮ ಮತ್ತು ಗೋಕರ್ಣದಲ್ಲಿ ವಿಸರ್ಜನೆ ಮಾಡಲಾಗುವುದು. ಜ.6ರಂದು ಹುಣ್ಣಿಮೆ ಇರುವುದರಿಂದ ಅಸ್ತಿ ವಿಸರ್ಜನೆ ಮಾಡಲಾಗುತ್ತಿಲ್ಲ. ಸಿದ್ಧೇಶ್ವರ ಅಪ್ಪನವರಿಗೆ ಕೃಷ್ಣೆಯ ಮೇಲೆ ಪ್ರೀತಿ ಇತ್ತು. ಅದರಂತೆ ಅವರ ಆಶಯದ ಮೇಲೆ ಅಸ್ತಿಯನ್ನು ವಿಸರ್ಜನೆ ಮಾಡಲಾಗುವುದು ಎಂದರು. ಸ್ವಾಮೀಜಿಗಳು, ಭಕ್ತರು ಉಪಸ್ಥಿತರಿದ್ದರು.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)