ಜಿಲ್ಲಾ ಮಟ್ಟದ ಅತ್ಯುತ್ತಮ ಯುವ ಸಂಘ ಪ್ರಶಸ್ತಿ ಆಯ್ಕೆಗಾಗಿ ಅರ್ಜಿ ಆಹ್ವಾನ
ಸರಕಾರ್ ನ್ಯೂಸ್ ವಿಜಯಪುರ
ಭಾರತ ಸರ್ಕಾರದ ವಿಜಯಪುರ ನೆಹರು ಯುವ ಕೇಂದ್ರದಿಂದ 2022-23ನೇ ಸಾಲಿನ ಜಿಲ್ಲಾ ಮಟ್ಟದ ಯುವ ಸಂಘ ಪ್ರಶಸ್ತಿ ಆಯ್ಕೆಗಾಗಿ ಅರ್ಹ ಯುವಕ, ಯುವತಿ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಯುವ ಸಂಘವು ಕರ್ನಾಟಕ ರಾಜ್ಯ ಸಂಘ-ಸಂಸ್ಥೆ ನೋಂದಣಿ ಕಾಯ್ದೆ ಪ್ರಕಾರ ನೋಂದಣಿಯಾಗಿರಬೇಕು. ಯುವ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡಿರಬೇಕು ಮತ್ತು ಅವಶ್ಯ ದಾಖಲಾತಿ ಲಗತ್ತಿಸಬೇಕು. ವಾರ್ಷಿಕ ಲೆಕ್ಕ ಪರಿಶೋಧಕ ಆಡಿಟ್ ವರದಿ ಕಡ್ಡಾಯವಾಗಿ ಸಲ್ಲಿಸುವುದು.
2021-2022ರ ಅವಧಿಯ ಛಾಯಾಚಿತ್ರಗಳು, ಪ್ರಶಸ್ತಿ ಪತ್ರಗಳು, ಪತ್ರಿಕಾ ವರದಿಗಳನ್ನು ಮಾತ್ರ ಪರಿಗಣಿನೆಗೆ ತೆಗೆದುಕೊಳ್ಳಲಾಗುವದು.
ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಒಂದು ಯುವ ಸಂಘಕ್ಕೆ 25,000 ರೂ.ಗಳ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ. ಅರ್ಜಿ ಸಲ್ಲಿಸಲು 2022ರ ಡಿಸೆಂಬರ್ 12 ಕೊನೆಯ ದಿನವಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಅಧಿಕಾರಿಗಳು, ನೆಹರು ಯುವ ಕೇಂದ್ರ, ವಿಜಯಪುರ ಕಚೇರಿ ಹಾಗೂ ದೂರವಾಣಿ ಸಂಖ್ಯೆ 08352-244130 ಸಂಪರ್ಕಿಸಲು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಾಹುಲ್ ಎಸ್ ಡೋಂಗರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.