ನಮ್ಮ ವಿಜಯಪುರ

ಬಟ್ಟೆ ತೊಳೆಯಲು ಕಾಲುವೆಗಿಳಿದ ಯುವಕ ನೀರು ಪಾಲು, ಎಲ್ಲಿ? ಹೇಗಾಯಿತು?

ಸರಕಾರ್ ‌ನ್ಯೂಸ್ ವಿಜಯಪುರ

ಬಟ್ಟೆ ತೊಳೆಯಲು ಕಾಲುವೆಗೆ ಇಳಿದಿದ್ದ ಯುವಕ ನೀರುಪಾಲಾದ ಘಟನೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ನಡೆದಿದೆ.

ಬಟ್ಟೆ ತೊಳೆಯಲು ಕಾಲುವೆಗೆ ಇಳಿದಿದ್ದ ಯುವಕ ನೀರುಪಾಲಾದ ಘಟನೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಹೊರ ಭಾಗದಲ್ಲಿನ ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ದುರ್ಗಪ್ಪಾ ಗೊಲ್ಲರ (20) ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ.

ಒಟ್ಟು ಮೂವರು ಯುವಕರು ಬಟ್ಟೆ ತೊಳೆಯಲು ಕಾಲುವೆಯಲ್ಲಿ ಇಳಿದಿದ್ದರು. ಈ ವೇಳೆ ದುರ್ಗಪ್ಪನ ಕಾಲು ಜಾರಿ ಕಾಲುವೆಯಲ್ಲಿ ಬಿದ್ದಿದ್ದಾನೆ. ಈಜು ಬಾರದ ದುರ್ಗಪ್ಪನನ್ನು ರಕ್ಷಿಸಲು
ಜೊತೆಗಿದ್ದ ಇಬ್ಬರು ಯುವಕರು ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ.

ಸ್ಥಳಕ್ಕೆ ಮನಗೂಳಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಶವ ಹೊರತೆಗೆಯುವ ಕಾರ್ಯಾಚರಣೆ ನಡೆಸಿದ್ದಾರೆ.

error: Content is protected !!