ಭೂ ಕಂಪನಕ್ಕೆ ಬೆಚ್ಚಿ ಬಿದ್ದ ಗುಮ್ಮಟ ನಗರಿ, ಬೆಳ್ಳೆಂಬೆಳಗ್ಗೆ ಭರ್ಜರಿ ಶಾಕ್, ತೀವ್ರತೆ ಎಷ್ಟಿತ್ತು ಗೊತ್ತಾ?
ಸರಕಾರ್ ನ್ಯೂಸ್ ವಿಜಯಪುರ
ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದ ಪದೇ ಪದೇ ಭೂಮಿ ಕಂಪಿಸುತ್ತಿದ್ದು, ಶನಿವಾರ ಮಾತ್ರ ಅದರ ತೀವ್ರತೆ ಸ್ವಲ್ಪ ದೊಡ್ಡ ಪ್ರಮಾಣದಲ್ಲೇ ಇತ್ತು !
ನುಸಕಿನ 5.40 ರ ಸುಮಾರಿಗೆ ಸ್ವಲ್ಪ ಭೂಮಿ ಅಲುಗಿದಂತಾಗಿದ್ದು ಅಷ್ಟೇನು ಗಮನಕ್ಕೆ ಬಂದಿರಲಿಲ್ಲ. ಆದರೆ ಎರಡನೇ ಬಾರಿಗೆ ಅಂದರೆ ಬೆಳಗ್ಗೆ 6.25 ರ ಸುಮಾರಿಗೆ ಮೂರ್ನಾಲ್ಕು ಸೆಕೆಂಡ್ ಭೂಮಿ ಅಲುಗಿದ್ದು ಜನ ನಿದ್ದೆಗಣ್ಣಲ್ಲೂ ಬೆಚ್ಚಿ ಮನೆಯಿಂದ ಹೊರಗೋಡಿ ಬಂದರು.
ನೆರೆಯ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಭಾಗದಲ್ಲಿ ಭೂಮಿ ಕಂಪಿಸಿದ್ದು ಇದರ ತೀವ್ರತೆ 4.9 ರಷ್ಟಿತ್ತು ಎನ್ನಲಾಗಿದೆ. ಭೂಮಿಯ 5 ಕಿಮೀ ಆಳದಲ್ಲಿ ಕಂಪನ ಸಂಭವಿಸಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಮಹಾರಾಷ್ಟ್ರದ ಜತ್ತನಲ್ಲೂ ಆಗಿದೆ:
ಮಹಾರಾಷ್ಟ್ರದ ಜತ್ತ ತಾಲೂಕಿನಿಂದಲೂ ಭೂಕಂನದ ವರದಿಯಾಗಿದೆ.
ಮಹಾರಾಷ್ಟ್ರದ ಭಾಗದ ಮರಬಗಿ, ತಿಕ್ಕುಂಡಿ, ಜಾಲಿಹಾಳ ಮುಚ್ಚಂಡಿ ಎಲ್ಲ ಕಡೆಯಲ್ಲೂ ಆಗಿದೆ. ಸುಮಾರ 10-15 ಸೆಕೆಂಡಗಳ ಕಾಲ ಕಂಪಸಿದೆ.
ಮಹಾರಾಷ್ಟ್ರ ರಾಜ್ಯದ ಜತ್ತ ತಾಲ್ಲೂಕಿನ ಮರಬಗಿ ಗ್ರಾಮದಲ್ಲಿ ಭೂಕಂಪನವಾದಾಗ ದನಗಳ ಮೇಲೆ ಇರುವ ಚಪ್ಪರದ ಪತ್ರಾಸಗಳು ಅಲುಗಾಡಿದವು, ದನಕರಗಳು ಬೆದರಿದವು, ತೊಟದ ಮನೆಯಲ್ಲಿರುವ ನಾವು ಎಲ್ಲರೂ ಮನೆಯಿಂದ ಹೊರಬಂದೇವವು ಎಂದು ಮರಬಗಿ ನಿವಾಸಿ ಅಣ್ಣಾರಾಯ ಗದ್ಯಾಳ ತಿಳಿಸಿದರು.
ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ, ಬಾಬಾನಗರ, ಬಿಜ್ಜರಗಿ, ಘೋಣಸಗಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಹುಬನೂರ, ಟಕ್ಕಳಕಿ, ಎಲ್ಲ ಗ್ರಾಮಗಳಲ್ಲಿ ಭಾರಿ ಸದ್ದಿನೊಂದಿಗೆ ಭೂಮಿ ಅಲುಗಾಡಿತು.
ಭಾರಿ ಸದ್ದು ಬರುವದರೊಂದಿಗೆ ನಾಯಿಗಳು ಬೊಗಳುವಿಕೆ ಜೋರಾಗಿತ್ತು, ಮನೆಯಲ್ಲಿ ಛಾವಣಿಯ ಮಣ್ಣು ಉದುರಿತು, ಹಿರಿಯರು ಮಕ್ಕಳ ಜೊತೆ ಮನೆಯಿಂದ ಹೊರ ಓಡಿ ಬಂದು, ಓಣಿಯಲ್ಲಿ ಭಯದಿಂದ ನಿಂತುಕೊಂಡು ಚರ್ಚೆ ಮಾಡತೊಡಗಿದರು.
ಒಟ್ಟಿನಲ್ಲಿ ಶನಿವಾರ ಬೆಳಗ್ಗೆ ಆದ ಭೂಕಂಪನದ ಅನುಭವ ಜನರನ್ನು ಬೆಚ್ಚಿ ಬೀಳಿಸಿದ್ದಂತೂ ನಿಜ.