ನಿವೃತ್ತ ಸರ್ಕಾರಿ ನೌಕರನಿಗೆ ದೋಖಾ, ಇಲೆಕ್ಟ್ರಿಕಲ್ ಸ್ಕೂಟರ್ ಹೆಸರಲ್ಲಿ ವಂಚನೆ, ಹೋದ ಹಣವೆಷ್ಟು?
ಸರಕಾರ್ ನ್ಯೂಸ್ ವಿಜಯಪುರ
ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಂಚನೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಇಂಥ ಪ್ರಕರಣಗಳನ್ನು ತಡೆಗಟ್ಟಲೆಂದು ಜಿಲ್ಲೆಗೊಂದು ಸೈಬರ್ ಠಾಣೆ ಆರಂಭಿಸಲಾಗಿದ್ದು ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಮೋಸ ಹೋಗುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.
ಅಂದ ಹಾಗೆ ಇಲ್ಲೋರ್ವ ನಿವೃತ್ತ ನೌಕರರೊಬ್ಬರು ಆನ್‌ಲೈನ್ ವ್ಯವಹಾರ ಮಾಡಲು ಹೋಗಿ ಧೋಖಾ ತಿಂದಿದ್ದಾರೆ. ಬಸವನಗರದ ಬಸ್ ನಿಲ್ದಾಣ ಬಳಿಯ ನಿವಾಸಿ ಬಾಪುಗೌಡ ಮೋಹನಗೌಡ ಪಾಟೀಲ (73) ಎಂಬುವವರು ಹಣ ಕಳದುಕೊಂಡಿದ್ದಾರೆ.
ಕೃಷಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಇವರು 2008ರಲ್ಲಿನಿವೃತ್ತಿಯಾಗಿದ್ದಾರೆ. ಹೀಗೆ ಮನೆಯಲ್ಲಿ ಕುಳಿತಾಗ ಮೊಬೈಲ್‌ನಲ್ಲಿ ಓಲಾ ಇಲೆಕ್ಟ್ರಿಕಲ್ ಸ್ಕೂಟರ್ ಖರೀದ ಮಾಡಲೆಂದು ಗೂಗಲ್ ಸರ್ಚ್ ಮಾಡಿದ್ದಾರೆ. ಅಲ್ಲಿ ಸಿಕ್ಕ ಒಂದು ಮೊಬೈಲ್ ನಂಬರ್‌ಗೆ ಸಂಪರ್ಕಿಸಲಾಗಿ ಅವರು 80 ಸಾವಿರ ಬೆಲೆ ಇದ್ದುಮೊದಲು 30 ಸಾವಿರ ರೂಪಾಯಿ ಕಟ್ಟಬೇಕೆಂದಿದ್ದಾರೆ. ಅದನ್ನು ನಂಬಿ ಬಾಪುಗೌಡ 30 ಸಾವಿರ ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಬಳಿಕ ಮತ್ತೆ 10 ಸಾವಿರ ರೂಪಾಯಿ ಕೇಳಲಾಗಿ ಬಾಪುಗೌಡರಿಗೆ ಸಂಶಯ ಬಂದಿದೆ. ಈ ಬಗ್ಗೆ ಪರಿಚಯದವರ ಬಳಿ ಚರ್ಚಿಸಲಾಗಿ ತಮಗೆ ಮೋಸ ಆಗಿರುವುದು ಗಮನಕ್ಕೆ ಬಂದಿದ್ದೆ. ಕೂಡಲೇ ಸೈಬರ್ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ತನಿಖೆ ಚುರುಕುಗೊಂಡಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)