ಮುಖಕ್ಕೆ ದಸ್ತಿ ಕಟ್ಟಿದ್ದ, ಕೈಯಲ್ಲಿ ರಾಡ್ ಹಿಡಿದಿದ್ದ, ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದ….ಯಾರೀತ?
ಸರಕಾರ್ ನ್ಯೂಸ್ ಇಂಡಿ
ಮುಖಕ್ಕೆ ದಸ್ತಿ ಕಟ್ಟಿಕೊಂಡು ಕೈಯಲ್ಲಿ ರಾಡ್ ಹಿಡಿದುಕೊಂಡು ರಾತ್ರಿ ಕತ್ತಲಲ್ಲಿ ನಿಂತಿದ್ದ ವ್ಯಕ್ತಿಯನ್ನು ಪೊಲೀಸರು ಚಾಲಾಕಿತನದಿಂದ ಹೆಡೆಮುರಿ ಕಟ್ಟಿ ತಂದಿದ್ದಾರೆ.
ಇಂಡಿ ಪಟ್ಟಣದಲ್ಲಿ ಜ. 3ರಂದು ರಾತ್ರಿ 11ರಿಂದ ಜ. 4ರಂದು ಬೆಳಗಿನ ಜಾವ 5 ಗಂಟೆವರೆಗೆ ನೈಟ್ ರೌಂಡ್ಸ್‌ನಲ್ಲಿದ್ದ ಪೊಲೀಸರು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಸರಾಫ್ ಬಜಾರ್ ಹತ್ತಿರ ರೌಂಡ್ಸ್‌ನಲ್ಲಿದ್ದ ಪೊಲೀಸರಿಗೆ ಕತ್ತಲಲ್ಲಿ ಮುಖಕ್ಕೆ ದಸ್ತಿ ಕಟ್ಟಿಕೊಂಡು, ಕೈಯಲ್ಲಿ ರಾಡ್ ಹಿಡಿದುಕೊಂಡು ನಿಂತಿದ್ದ ವ್ಯಕ್ತಿ ಕಾಣಿಸಿಕೊಂಡಿದ್ದಾನೆ. ಕೂಡಲೇ ಗಸ್ತು ಸಿಬ್ಬಂದಿಯನ್ನು ಕರೆಯಿಸಿಕೊಂಡು ಕಾರ್ಯಾಚರಣೆಗಿಳಿಯಲಾಗಿ ಆತ ಓಡಿ ಹೋಗಿದ್ದಾನೆ. ಕೂಡಲೇ ಪೊಲೀಸರು ಆತನನ್ನು ಬೆನ್ನಟ್ಟಿದ್ದಾರೆ. ಮುಂದೆ ಮುನಸಿ ಅಂಗಡಿಯ ಹಿಂದುಗಡೆ ಮರೆಯಾಗಿ ಕುಳಿತ್ತಿದ್ದನ್ನು ಗಮನಿಸಿದ ಪೊಲೀಸರು ಆತನನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ.
ಯಾರೀತ?
ಪೊಲೀಸರ ವಿಚಾರಣೆಯಲ್ಲಿ ಆತ ಬಸು ಹಣಮಂತ ಕಾಳೆ (31) ಎಂದು ಗೊತ್ತಾಗಿದೆ. ಈತ ಇಂಡಿಯ ಹರಿಣಶಿಖಾರಿಯ ಓಣಿಯವನಾಗಿದ್ದು, ವೃತ್ತಿಯಿಂದ ಕೂಲಿ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದಾನೆ. ಆದರೆ, ಮುಖಕ್ಕೆ ದಸ್ತಿ ಕಟ್ಟಿಕೊಂಡು, ಕೈಯಲ್ಲಿ ರಾಡ್ ಹಿಡಿದುಕೊಂಡು ತನ್ನ ಇರುವಿಕೆ ಮರೆಮಾಚಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡುವ ಉದ್ದೇಶದಿಂದ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದರಿಂದ ಪೊಲೀಸರು ಆತನ ಮೇಲೆ ಎಫ್ ಐಆರ್ ದಾಖಲಿಸಿದ್ದಾರೆ. ಜ.4ರಂದು ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)