ವಿಜಯಪುರ

ಬ್ಯಾಂಕ್‌ ಖಾತೆಯಿಂದ 10 ಲಕ್ಷ ರೂ. ಗಾಯಬ್‌ !!! ಹುಷಾರ್‌ ! ನಿಮಗೂ ಬರಬಹುದು ಇಂಥ ಮೆಸೇಜ್‌!!!

ಸರಕಾರ ನ್ಯೂಸ್‌ ವಿಜಯಪುರ

ಮೊಬೈಲ್‌ ಬಳಕೆದಾರರೇ ಹುಷಾರ್‌!!! ನಿಮಗೂ ಇಂಥ ಮೆಸೇಜ್‌ ಬರಬಹುದು, ನಿಮ್ಮ ಹಣವೂ ಗಾಯಬ್‌ ಆಗಬಹುದು. ಅದಕ್ಕೂ ಮುನ್ನ ಈ ವರದಿ ಓದಿ ಎಚ್ಚರಗೊಳ್ಳಿ, ನಿಮ್ಮ ಆತ್ಮೀಯರನ್ನೂ ಅಲರ್ಟ್‌ ಮಾಡಿ…!

ಯಾವುದೇ ಮಾಹಿತಿ ಹಂಚಿಕೊಳ್ಳದಿದ್ದರೂ ಬ್ಯಾಂಕ್‌ ಖಾತೆಯಿಂದ ಇದ್ದಕ್ಕಿದ್ದಂತೆ 10 ಲಕ್ಷ ರೂಪಾಯಿ ಕಳೆದುಕೊಂಡ ಉದ್ಯಮೀಯೋರ್ವ ಇದೀಗ ಹಣಕ್ಕಾಗಿ ಸೈಬರ್‌ ಪೊಲೀಸರ ಮೊರೆಹೋಗಿದ್ದಾನೆ.

ಯಾವುದೇ ಮಾಹಿತಿ ಹಂಚಿಕೊಳ್ಳದಿದ್ದರೂ, ಬ್ಯಾಂಕ್‌  ವಿವರ ನೀಡದಿದ್ದರೂ, ಕಾಲ್‌ ಕಡಿತಗೊಳಿಸಿದರೂ ಹಣ ಗಾಯಾಬ್‌ ಆಗಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಉದ್ಯಮಿ ತಾನು ಮಾಡಿದ ಸಣ್ಣ ಲೋಪದ ಬಗ್ಗೆಯೂ ಪೊಲೀಸರ ಗಮನಕ್ಕೆ ತಂದಿದ್ದಾನೆ.

ಅಂದ ಹಾಗೆ 10 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ ಯಾರು ಅಂತೀರಾ? ಅವರು…

ಬಸ್ ಹತ್ತುವ ವೇಳೆ ಆಯತಪ್ಪಿ ಬಿದ್ದ ಮಹಿಳೆ, ಕಾಲ ಮೇಲೆ ಹರಿದ ಬಸ್ ಚಕ್ರ, ಅಯ್ಯಯ್ಯೋ ಯಾರು ಈ ಮಹಿಳೆ? ಏನಾಯಿತು?

ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಮೋಹನ್‌ ಕಾಳು ರಾಠೋಡ ಅಂತಾ.

ಇಂಡಿ ತಾಲೂಕಿನ ಚಿಕ್ಕಮಣ್ಣೂರ ಕ್ರಾಸ್‌ನಲ್ಲಿ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಪಂಪ್‌ ಇಟ್ಟುಕೊಂಡಿರುವ ಇವರು ಅಗರಖೇಡ ಗ್ರಾಮದ ಕೆನರಾ ಬ್ಯಾಂಕ್‌ನಲ್ಲಿ ಪೆಟ್ರೋಲಿಯಮ್ಸ್‌ ಹೆಸರಿನಲ್ಲಿ ಚಾಲ್ತಿ ಖಾತೆ ಹೊಂದಿದ್ದಾರೆ. ಈ ಖಾತೆಗೆ ಮೊಬೈಲ್‌ ಲಿಂಕ್‌ ಇದ್ದು, ಮೇ 18 ರಂದು ಇವರಿಗೆ ಡಿಯರ್‌ ಕಸ್ಟಮರ್‌ ನಿಮ್ಮ ಬ್ಯಾಂಕ್‌ ಖಾತೆ ಬ್ಲಾಕ್‌ ಆಗಿದ್ದು, ಆಧಾರ್‌ ಕಾರ್ಡ್‌ ಅಪಡೇಟ್‌ ಆಗಬೇಕಿದೆ. ಅದಕ್ಕಾಗಿ ಈ ಎಪಿಕೆ ಆಪ್‌ ಡೌನ್‌ಲೋಡ್‌ ಮಾಡುವಂತೆ ಸಂದೇಶ ಬಂದಿದೆ. ಕೂಡಲೇ ಮೋಹನ್‌ ಆಪ್‌ ಡೌನ್‌ಲೋಡ್‌ ಮಾಡಿದ್ದಾರೆ. ಬಳಿಕ ಮೇ 20ರಂದು ಅಪರಚಿತ ವ್ಯಕ್ತಿ ಕರೆ ಮಾಡಿ ಬಿಜೆಪಿ ಕಾರ್ಯಾಲಯದಿಂದ ಮಾತನಾಡುತ್ತಿದ್ದು, ನಿಮಗೆ ಕೆಲವು ಮಾಹಿತಿ ಹೇಳಬೇಕಾಗಿದೆ ನಿಮ್ಮ ಮೊಬೈಲ್‌ ನೆಟ್‌ ಆನ್‌ ಮಾಡಿ ವಾಟ್ಸಪ್‌ ಓಪನ್‌ ಮಾಡಿ ಎಂದು ತಿಳಿಸಿದ್ದಾರೆ. ಆಗ ಮೋಹನ್‌ ರಾಂಗ್‌ ನಂಬರ್‌ ಎಂದು ಹೇಳಿ ಕರೆ ಕಡಿತಗೊಳಿಸಿದ್ದಾರೆ. ಇದಾದ ಕೆಲವೇ ಹೊತ್ತಿನಲ್ಲಿ ಮೋಹನ್‌ ಬ್ಯಾಂಕ್‌ ಖಾತೆಯಿಂದ 5 ಲಕ್ಷ ರೂ. ಕಡಿತಗೊಂಡಿದೆ. ಬಳಿಕ ಬಂದ ಮೆಸೇಜ್‌ ನೋಡುವಷ್ಟರಲ್ಲಿಯೇ ಮತ್ತೊಮ್ಮೆ 5 ಲಕ್ಷ ರೂ.ಕಡಿತಗೊಂಡ ಬಗ್ಗೆ ಸಂದೇಶ ಬಂದಿದೆ. ಆಗ ಮೋಹನ್‌ ಖಾತೆ ಫ್ರೀಜ್‌ ಮಾಡಿಸಿ ಸೈಬರ್‌ ಸಹಾಯವಾಣಿಗೆ ದೂರು ನೀಡಿದ್ದಾರೆ.

ಇಂಥ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!