ವಿಜಯಪುರ

ಹಿರೇಬೇವನೂರನಲ್ಲಿ ಸ್ನೇಹ ಸಮ್ಮಿಲನ, ಶ್ರೀ ಮರುಳ ಸಿದ್ಧೇಶ್ವರ ಶಿಕ್ಷಣ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ, ಬಿಜೆಪಿ ಮುಖಂಡ ಡೊಮನಾಳ ಆಶಯ..

ಇಂಡಿ: ಶೈಕ್ಷಣಿಕವಾಗಿ ಹಿಂದುಳಿದಿರುವ ಇಂಡಿ ತಾಲೂಕು ಇದೀಗ ಹಂತ ಹಂತವಾಗಿ ಮುಂದೆ ಸಾಗುತ್ತಿದೆ. ಅಂಥದರಲ್ಲಿ ಗ್ರಾಮೀಣ ಮಕ್ಕಳ ಶಿಕ್ಷಣ ಪ್ರಗತಿಗೆ ಶ್ರಮಿಸುತ್ತಿರುವ ಹಿರೇಬೇವನೂರಿನ ಶ್ರೀ ಮರುಳ ಸಿದ್ಧೇಶ್ವರ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ ಎಂದು ಬಿಜೆಪಿ ಮುಖಂಡ ಎಸ್‌.ಎ. ಪಾಟೀಲ ಡೊಮನಾಳ ಆಶಿಸಿದರು.

ಹಿರೇಬೇವನೂರ ಗ್ರಾಮದ ಶ್ರೀ ಮರುಳಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಗಾಯತ್ರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮಿಲನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮೀಣ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕು. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕೆಂದು ತಿಳಿಸಿದರು.

ವೇದ ಮೂರ್ತಿ ದಯಾನಂದ ಹಿರೇಮಠ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಬಿ ಎಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು, ಶೀಲವಂತ ಉಮರಾಣಿ ಫೋಟೊ ಪೂಜೆ ನೆರವೇರಿಸಿದರು.

ಎಸ್ ಬಿ ಪಡಶೇಟ್ಟಿ ಶ್ರೀಶೈಲಗೌಡ ಬಿರಾದಾರ, ನಾಗುಗೌಡ ಪಾಟೀಲ, ಗಿರಮಲ್ಲಗೌಡ ಬಿರಾದಾರ, ಬಾಗಣ್ಣಾ ಬುರುಕುಲೆ, ಎಸ್.ಕೆ. ಹೂಗಾರ, ಶಾಂತು ಸೋಲಾಪುರ, ದೊಡ್ಡಪ್ಪ ಪೂಜಾರಿ, ಕೆ.ಜಿ. ನಾಕಾರ, ಚಾಂದ ಶೇಖ, ವಿ.ಜಿ. ಕಲ್ಮನಿ, ಸೋಮು ಕುಂಬಾರ, ಈರಣ್ಣಾ ಉಪ್ಪಿನ, ಸುಶೀಲಾ ಆರ್.ಪಾಟೀಲ, ಮಲ್ಲಿಕಾರ್ಜುನ ಪವಾಡಿ, ಶಿವಶಂಕರ್ ಮೇತ್ರಿ, ಟೋಪನಗೌಡ ಪಾಟೀಲ, ಸಂಗು ಭಾಸಗಿ, ಜಗದೀಶ ಅಲಗೊಂಡ, ವಿಜಯಕುಮಾರ ಬಿರಾದಾರ, ಸುನೀಲ ವಾಲಿ ಮತ್ತಿತರರಿದ್ದರು.

ಆರ್ ವಿ ಪಾಟೀಲ ಸ್ವಾಗತಿಸಿದರು, ಸುರೇಶ ಹತ್ತರಕಿ ಮತ್ತು ಅಪೂರ್ವ ಕೆ.ಆರ್ ನಿರೂಪಿಸಿದರು, ಸಂಗಮೇಶ ಹಂಜಗಿ ವಂದಿಸಿದರು

error: Content is protected !!